Select Your Language

Notifications

webdunia
webdunia
webdunia
webdunia

ಲಂಡನ್ ಯುವಕನ ಕೈ ಹಿಡಿದ ಸಿಲಿಕಾನ್ ಸಿಟಿ ಹುಡುಗಿ

ಲಂಡನ್ ಯುವಕನ ಕೈ ಹಿಡಿದ ಸಿಲಿಕಾನ್ ಸಿಟಿ ಹುಡುಗಿ
ಬೆಂಗಳೂರು , ಶನಿವಾರ, 14 ಅಕ್ಟೋಬರ್ 2017 (16:18 IST)
ಬೆಂಗಳೂರು: ಸಿಲಿಕಾನ್ ಸಿಟಿಯ ಕುವರಿ ಲಂಡನ್ ಯುವಕನ ಜತೆ ಸಪ್ತಪದಿ ತುಳಿದಿದ್ದಾಳೆ.

ಬೆಂಗಳೂರು ಮೂಲದ ಶೃತಿ ಕಂಪನಿ ಕೆಲಸದ ಮೇಲೆ ಕೆಲ ವರ್ಷಗಳಿಂದ ಲಂಡನ್‌‌ನಲ್ಲಿ ವಾಸವಾಗಿದ್ದರು. ಈ ವೇಳೆ ಲಂಡನ್‌ ಮೂಲದ ಪ್ಯಾಟ್ರಿಕ್ ಜತೆ ಶೃತಿಗೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು ವರ್ಷದಿಂದ ಶೃತಿ ಹಾಗೂ ಪ್ಯಾಟ್ರಿಕ್ ಪ್ರೀತಿಸುತ್ತಿದ್ದರು.

ಇಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಶೃತಿ ತಮ್ಮ ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದಾರೆ. ಇತ್ತ ಪ್ಯಾಟ್ರಿಕ್ ಮನೆಯವರು ಒಪ್ಪಿದ್ದು, ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಬಸವನಗುಡಿಯ ಗಂಜಾಂ ಕಲ್ಯಾಣಮಂಟಪದಲ್ಲಿ ಈ ಮದುವೆ ನಡೆಯಿತು.

ಇಬ್ಬರೂ ಸಹ ಸಾಂಪ್ರದಾಯಿಕೆ ಉಡುಗೆಯಲ್ಲಿ ಮಿಂಚುತ್ತಿದ್ದರು. ದೇಶ, ಜಾತಿ ಭಾಷೆಯ ಗಡಿ ದಾಟಿದ ಪ್ರೇಮ ಪ್ರಕರಣವೊಂದು ಮದುವೆಯಲ್ಲಿ ಸುಖಾಂತ್ಯ ಕಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ ರಾಜಕೀಯ ಭವಿಷ್ಯ ದೇವೇಗೌಡರಿಂದ ತೀರ್ಮಾನ: ರೇವಣ್ಣ