Publish Date: Tue, 10 Oct 2017 (08:42 IST)
Updated Date: Tue, 10 Oct 2017 (08:43 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಬರಲ್ಲ ಎಂದಿದ್ದ ಶ್ರುತಿ ಹಾಸನ್ ವಿವಾದದ ನಂತರ ಎಚ್ಚೆತ್ತುಕೊಂಡಿದ್ದು, ಕನ್ನಡಕ್ಕೆ ಹೆಮ್ಮೆಯಿಂದಲೇ ಬರುತ್ತೇನೆ ಎಂದಿದ್ದಾರೆ.
ಪೊಗರು ಚಿತ್ರಕ್ಕೆ ಶ್ರುತಿ ಹಾಸನ್ ಬರುತ್ತಾರೆಂಬ ಗಾಳಿ ಸುದ್ದಿ ಹಿನ್ನಲೆಯಲ್ಲಿ ಅವರು ಟ್ವೀಟ್ ಮಾಡಿ ನಾನು ಕನ್ನಡದಲ್ಲಿ ನಟಿಸುತ್ತಿಲ್ಲ ಎಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಟ ಜಗ್ಗೇಶ್ ಕೂಡಾ ಶ್ರುತಿ ಮಾತಿಗೆ ಸಿಟ್ಟಿಗೆದ್ದು, ಕನ್ನಡದ ನಿರ್ಮಾಪಕರು ಭಿಕ್ಷುಕರಲ್ಲ. ನಮ್ಮ ಹೀರೋಯಿನ್ ಗಳೇ ನಮಗೆ ಚೆಂದ ಎಂದಿದ್ದರು.
ವಿವಾದವಾದ ನಂತರ ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ನನಗೆ ಕನ್ನಡದ ಬಗ್ಗೆ ಹೆಮ್ಮೆಯಿದೆ. ನನ್ನ ತಂದೆ (ಕಮಲ್ ಹಾಸನ್) ಕೂಡಾ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉತ್ತಮ ಅವಕಾಶ ಸಿಕ್ಕರೆ ಹೆಮ್ಮೆಯಿಂದಲೇ ನಟಿಸಿ ಹೋಗುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ