Publish Date: Thu, 05 Oct 2017 (10:01 IST)
Updated Date: Thu, 05 Oct 2017 (10:19 IST)
ಬೆಂಗಳೂರು: ಕ್ರಿಕೆಟಿಗರು ಮತ್ತು ಸಿನಿಮಾದವರಿಗೆ ಹತ್ತಿರದ ನಂಟಿದೆ. ಆದರೆ ಕನ್ನಡ ಸಿನಿಮಾ ನಟರು ಕ್ರಿಕೆಟಿಗರ ಜತೆ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಟೀಂ ಇಂಡಿಯಾ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದಾರುವುದು ಕುತೂಹಲಕ್ಕೆ ಕಾರಣವಾಗಿದೆ.
ಅನಿಲ್ ಕುಂಬ್ಳೆ ಕಚೇರಿಗೆ ನಟ ಗಣೇಶ್ ಭೇಟಿ ನೀಡಿದ್ದಾರೆ. ಈ ಫೋಟೋವನ್ನು ಕುಂಬ್ಳೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ‘ನೋಡಿ ಯಾರು ನನ್ನ ಕಚೇರಿಗೆ ಬಂದಿದ್ದಾರೆ ಅಂತ. ಗೋಲ್ಡನ್ ಸ್ಟಾರ್ ಜತೆಗೊಂದು ಅಚ್ಚರಿ ಭೇಟಿ’ ಎಂದು ಕುಂಬ್ಳೆ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಗಣೇಶ್ ಯಾಕೆ ಕುಂಬ್ಳೆ ಕಚೇರಿಗೆ ಭೇಟಿ ನೀಡಿದರು ಎನ್ನುವುದು ಗೊತ್ತಾಗಿಲ್ಲ. ಇದರ ಹಿಂದೆ ಸಿನಿಮಾ ಮಾಡುವ ಉದ್ದೇಶವೇನಾದರೂ ಇದೆಯಾ? ಹಾಗೇನಾದರೂ ಇದ್ದರೆ ಸದ್ಯದಲ್ಲೇ ತಿಳಿಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ