Publish Date: Thu, 05 Oct 2017 (08:49 IST)
Updated Date: Thu, 05 Oct 2017 (08:51 IST)
ಮುಂಬೈ: ಟೀಂ ಇಂಡಿಯಾದ ಹೆಚ್ಚಿನ ಆಟಗಾರರಿಗೆ ವಿಶಿಷ್ಟ ನಿಕ್ ನೇಮ್ ಗಳಿವೆ. ಹಾಗೆಯೇ ನಾಯಕ ವಿರಾಟ್ ಕೊಹ್ಲಿಗೆ ‘ಚೀಕು’ ಎಂದು ಧೋನಿ ಪ್ರೀತಿಯಿಂದ ಕರೆಯುತ್ತಾರೆ. ಈ ಹೆಸರಿನ ಹಿಂದಿನ ಕತೆಯೇನು ಗೊತ್ತಾ?
ಅದನ್ನು ಸ್ವತಃ ಕೊಹ್ಲಿ ಅಮೀರ್ ಖಾನ್ ಜತೆಗಿನ ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ. ತನಗೆ ಚೀಕು ಎಂದು ಹೆಸರು ಬಂದಿದ್ದು ಹೇಗೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.
‘ಅಂಡರ್ 17 ತಂಡಕ್ಕೆ ಆಡುವಾಗ ನನ್ನ ಕೇಶ ವಿನ್ಯಾಸ ಹೇಗಿತ್ತೆಂದರೆ ಕಿವಿ ದೊಡ್ಡದಾಗಿ ಕಾಣಿಸುವಂತಿತ್ತು. ಹಾಗಾಗಿ ಸಹ ಸದಸ್ಯರು ನನ್ನನ್ನು ಚೀಕು ಮೊಲ ಎನ್ನುತ್ತಿದ್ದರು. ಹೀಗೇ ಧೋನಿಯೂ ನನ್ನನ್ನು ಕರೆಯಲು ಪ್ರಾರಂಭಿಸಿದರು. ಇದು ಒಮ್ಮೆ ಸ್ಟಂಪ್ ಮೈಕ್ರೋಫೋನ್ ನಿಂದಾಗಿ ಎಲ್ಲರಿಗೂ ಗೊತ್ತಾಯಿತು’ ಎಂದು ಕೊಹ್ಲಿ ತಮ್ಮ ನಿಕ್ ನೇಮ್ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ