Publish Date: Tue, 03 Oct 2017 (13:22 IST)
Updated Date: Tue, 03 Oct 2017 (16:06 IST)
ಬೆಂಗಳೂರಿನ ರಸ್ತೆಗಳಲ್ಲಿ ಬಾಯ್ತೆರೆದಿರುವ ಗುಂಡಿಗೆ ಮತ್ತೊಂದು ದಂಪತಿ ಬಲಿಯಾಗಿದೆ. ಮೈಸೂರು ರಸ್ತೆಯ ಫ್ಲೈಓವರ್`ನಲ್ಲಿ ಗುಂಡಿಯನ್ನ ತಪ್ಪಿಸಲು ಹೋದ ಬೈಕ್`ಗೆ ತಮಿಳುನಾಡಿನ ಬಸ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ನಡೆದಿದೆ.
ಆಂಥೋನಿ ಜೋಸೆಫ್ ಮತ್ತು ಸಗಾಯಿ ಮೇರಿ ನಿನ್ನೆ ತಡರಾತ್ರಿ ಜೆ.ಜೆ. ನಗರಕ್ಕೆ ಸಂಚರಿಸುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ. ಗುಂಡಿಗಳಲ್ಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಗುಂಡಿ ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭ ಹಿಂಬದಿ ಬರುತ್ತಿದ್ದ ತಮಿಳುನಾಡು ಬಸ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಪೇಟೆ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ. ರಸ್ತೆಗಳ ಗುಂಡಿ ಮುಚ್ಚುವಂತೆ ಒತ್ತಾಯಿಸಿದ್ಧಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ