Publish Date: Tue, 03 Oct 2017 (12:04 IST)
Updated Date: Tue, 03 Oct 2017 (12:11 IST)
ಡೇರಾ ಸಚ್ಚಾ ಸೌಧದ ಗುರು, ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೊತೆ ಅಕ್ರಮ ಸಂಬಂಧದ ಆರೋಪಗಳನ್ನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ತಳ್ಳಿ ಹಾಕಿದ್ದಾರೆ.
ರಾಮ್ ರಹೀಮ್ ಜೈಲು ಸೇರಿದ ಬಳಿಕ ನಾಪತ್ತೆಯಾಗಿದ್ದ ಹನಿಪ್ರೀತ್ ಈಗ ದಿಢೀರ್ ಮಾಧ್ಯಮವೊಂದರ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಸದ್ಯದಲ್ಲೇ ಪೊಲೀಸರಿಗೆ ಶರಣಾಗುವುದಾಗಿ ಹನಿಪ್ರೀತ್ ಸಂದರ್ಶನದಲ್ಲಿ ಹೇಳಿದ್ದಾಳೆ. ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಂದೆ ಹೋಗುತ್ತೇನೆ. ನಾನು ಮತ್ತು ತಂದೆ ರಾಮ್ ರಹೀಮ್ ನಡುವಿನ ತಂದೆ-ಮಗಳ ಸಂಬಂಧವನ್ನ ಜನ ತಪ್ಪಾಗಿ ಅರ್ಥೈಸುತ್ತಿದ್ದಾರೆ. ಒಬ್ಬ ತಂದೆ ಮಗಳನ್ನ ಪ್ರೀತಿಯಿಂದ ಕಾಣಬಾರದೇ..? ಪ್ರೀತಿಯಿಂದ ಮುಟ್ಟಬಾರದಾ..? ಎಂದು ಪ್ರಶ್ನಿಸಿದ್ದಾಳೆ.
ರಾಮ್ ರಹೀಮ್ ಜೊತೆ ಸೆಕ್ಸ್ ಮಾಡುವಾಗ ನನ್ನ ಪತ್ನಿ ಹನಿಪ್ರೀತ್ ಸಿಕ್ಕಿಬಿದ್ದಿದ್ದಳು. ಡೇರಾ ಸಚ್ಚಾ ಸೌಧದ ಗುಫಾದಲ್ಲಿ ರಾಮ್ ರಹೀಮ್ ಜಪತೆ ಹನಿಪ್ರೀತ್ ಮಲಗುತ್ತಿದ್ದಳು. ಇಬ್ಬರನ್ನೂ ಬೆತ್ತಲಾಗಿ ಕಂಡಿದ್ದೇನೆ ಎಂದು ಮಾಜಿ ಪತಿ ವಿಶ್ವಾಸ್ ಗುಪ್ತಾ ಆರೋಪಿಸಿದ್ದರು.
ಆದರೆ, ಈ ಎಲ್ಲ ಆರೋಪಗಳನ್ನ ಹನಿಪ್ರೀತ್ ಅಲ್ಲಗಳೆದಿದ್ದಾರೆ. ನಾನು ಎಲ್ಲಿಯೂ ಓಡಿಹೋಗಿಲ್ಲ. ನೇಪಾಳಕ್ಕೆ ಓಡಿಹೋಗಿದ್ದೇನೆಂಬ ಆರೋಪಗಳು ಸುಳ್ಳು ಸೂಕ್ತ ಕಾನೂನು ಸಲಹೆಗಾಗಿ ಕಾಯುತ್ತಿದ್ದೆ. ದೆಹಲಿ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿದ್ದು, ಪಂಜಾಬ್ ಕೋರ್ಟ್ ಮುಂದೆ ಹೋಗುವುದಾಗಿ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ