Select Your Language

Notifications

webdunia
webdunia
webdunia
webdunia

ಬೆಂಗಳೂರು 5 ಜಿ ಪಡೆಯುವ ಮೊದಲ ನಗರವಾಗಲಿದೆ: ಏರ್‌ಟೆಲ್

ಬೆಂಗಳೂರು 5 ಜಿ ಪಡೆಯುವ ಮೊದಲ ನಗರವಾಗಲಿದೆ: ಏರ್‌ಟೆಲ್
ಬೆಂಗಳೂರು , ಬುಧವಾರ, 27 ಸೆಪ್ಟಂಬರ್ 2017 (20:25 IST)
ಮುಂಬರುವ ಕೆಲವೇ ತಿಂಗಳುಗಳಲ್ಲಿ 4ಜಿಗಿಂತ ಮೂರು ಪಟ್ಟು ಡೇಟಾ ವೇಗದ ಅನುಭವ ಪಡೆಯಲು ಬೆಂಗಳೂರು ನಾಗರಿಕರಿಗೆ  ಸುವರ್ಣಾವಕಾಶ ಒದಗಿ ಬಂದಿದೆ ಎಂದು ಏರ್‌ಟೆಲ್ ಮೂಲಗಳು ತಿಳಿಸಿವೆ. 
5 ಜಿ ತಂತ್ರಜ್ಞಾನವನ್ನು ನಗರದಲ್ಲಿ ಪ್ರಾರಂಭಿಸಲು ಏರ್‌ಟೆಲ್ ಸಿದ್ದತೆ ಆರಂಭಿಸಿದ್ದು, 5ಜಿ ತಂತ್ರಜ್ಞಾನವನ್ನು ಹೊಂದಿರುವ ದೇಶದಲ್ಲಿಯೇ ಮೊದಲನೇ ನಗರ ಎನ್ನುವ ಗೌರವಕ್ಕೆ ಪಾತ್ರವಾಗಲಿದೆ.
 
ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್ ಸಂಸ್ಥೆ ತನ್ನ ಬೃಹತ್ ಮಲ್ಟಿಪಲ್-ಇನ್ಪುಟ್ ಮಲ್ಟಿ-ಔಟ್ಪುಟ್ (ಬೃಹತ್ MIMO) ತಂತ್ರಜ್ಞಾನ 5ಜಿ ನೆಟ್‌ವರ್ಕ್‌ಗೆ ಪ್ರಮುಖ ಸಾಮರ್ಥ್ಯವನ್ನು ನೀಡುತ್ತದೆ ಎಂದು ತಿಳಿಸಿದೆ. 
 
ಬೆಂಗಳೂರಿನೊಂದಿಗೆ, ಕೋಲ್ಕತಾ ನಗರ ಕೂಡಾ 5 ಜಿ ತಂತ್ರಜ್ಞಾನವನ್ನು ಮೊದಲ ಹಂತದಲ್ಲಿ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
 
5 ಜಿಬಿಗೆ 500 ಎಂಬಿಪಿಎಸ್‌ನಿಂದ 1ಜಿಬಿಪಿಎಸ್‌ ವರೆಗೆ ವೇಗವನ್ನು ಹೊಂದಲು ಸಾಧ್ಯವಿದೆ, ಏರ್‌ಟೆಲ್ ಸಂಸ್ಥೆ 4 ಜಿ ಗಿಂತ ಎರಡು ಅಥವಾ ಮೂರು ಪಟ್ಟು ವೇಗದ ಡೇಟಾ ನೀಡಲು ನಿರೀಕ್ಷಿಸಿದೆ ಎನ್ನಲಾಗುತ್ತಿದೆ.
 
ಪ್ರಸ್ತುತ 4ಜಿ ನೆಟ್‌ವರ್ಕ್‌ಗಳು 16 ಎಂಬಿಪಿಎಸ್‌ ವರೆಗೆ ವೇಗವನ್ನು ಹೊಂದಿವೆ. ಏರ್‌ಟೆಲ್ 5 ಜಿ 40-45 ಎಂಪಿಬಿಎಸ್‌ ವರೆಗೆ ವೇಗ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸರಿಯಾದ ಟೈಂಗೆ ಬಸ್ ಇಲ್ಲ ಎಂದ ವಿದ್ಯಾರ್ಥಿಗೆ ಬಿತ್ತು ಗೂಸಾ