Select Your Language

Notifications

webdunia
webdunia
webdunia
webdunia

ದೇಶದ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ದೇಶದ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ
ಬೆಂಗಳೂರು , ಮಂಗಳವಾರ, 26 ಸೆಪ್ಟಂಬರ್ 2017 (15:41 IST)
ಭಾರತದ ಐಟಿ ರಾಜಧಾನಿ, ಬೆಂಗಳೂರು, ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ನವದೆಹಲಿ ಈ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ.
ಸೋಮವಾರ ಬಿಡುಗಡೆಯಾದ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2017 ಪ್ರಕಾರ. ಬೆಂಗಳೂರಿನ 51 ವ್ಯಕ್ತಿಗಳ ಆಸ್ತಿಯ ನಿವ್ವಳ ಮೌಲ್ಯ ಕನಿಷ್ಠ 1,000 ಕೋಟಿ ರೂಪಾಯಿಗಳಾಗಿವೆ, ಈ ಪಟ್ಟಿಯಲ್ಲಿ ಬೆಂಗಳೂರಿನ 23 ಹೊಸ ಮುಖಗಳಿವೆ. 182 ಶ್ರೀಮಂತ ಉದ್ಯಮಿಗಳನ್ನು ಹೊಂದುವ ಮೂಲಕ ಮುಂಬೈ ಅಗ್ರಸ್ಥಾನವನ್ನು ಪಡೆದಿದೆ. 117 ಶ್ರೀಮಂತ ಉದ್ಯಮಿಗಳೊಂದಿಗೆ ನವದೆಹಲಿ ಎರಡನೇ ಸ್ಥಾನವನ್ನು ಪಡೆದಿದೆ.
 
ಬೆಂಗಳೂರು ಹೊರತುಪಡಿಸಿದಲ್ಲಿ 55 ಉದ್ಯಮಿಗಳು ಸಾವಿರ ಕೋಟಿ ರೂಪಾಯಿಗೂ ಅಧಿಕ ಸಂಪತ್ತನ್ನು ಹೊಂದಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ 1000 ಕೋಟಿ ಆಸ್ತಿ ಹೊಂದಿರುವ ಉದ್ಯಮಿಗಳ ಸಂಖ್ಯೆ 55ಕ್ಕೆ ತಲುಪಿದೆ. ಮುಂಬೈ ಹೊರತುಪಡಿಸಿದಲ್ಲಿ ಮಹಾರಾಷ್ಟ್ರದಲ್ಲಿ ಇತರ ನಗರಗಳಲ್ಲಿ ನೆಲೆಸಿರುವ 32 ಉದ್ಯಮಿಗಳು ಸಾವಿರ ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ 
 
ಆಸಕ್ತಿಕರ ವಿಷಯವೆಂದರೆ 13 ಉದ್ಯಮಿಗಳು ಉದ್ಯಮವನ್ನು ಸ್ಥಾಪಿಸಲು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. 23 ಉದ್ಯಮಿಗಳು ಮಹಾರಾಷ್ಟ್ರಕ್ಕೆ ಮತ್ತು 22 ಉದ್ಯಮಿಗಳು ನವದೆಹಲಿಗೆ ಉದ್ಯಮ ಸ್ಥಾಪಿಸಲು ವಲಸೆ ಬಂದಿದ್ದಾರೆ.
 
ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅಗ್ರಸ್ಥಾನ ಪಡೆದಿದ್ದು ಅವರ ನಿವ್ವಳ ಮೌಲ್ಯದಲ್ಲಿ 58% ಹೆಚ್ಚಳವಾಗಿ 2,57,900 ಕೋಟಿ ರೂಪಾಯಿಗಳಾಗಿವೆ. ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಅವರು 89,000 ಕೋಟಿ ರೂ. ನಿವ್ವಳ ಸಂಪತ್ತು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ, ಎಲ್ ಎನ್ ಮಿತ್ತಲ್ (ರೂ. 88,200 ಕೋಟಿ) ಮೂರನೇ ಸ್ಥಾನ,  ಶಿವ ನಾದರ್ (85,100 ಕೋಟಿ ರೂ)ಗೆ ನಾಲ್ಕನೇ ಸ್ಥಾನ ಲಭಿಸಿದೆ.
 
ಬೆಂಗಳೂರಿನಲ್ಲಿ ಶ್ರೀಮಂತ ಉದ್ಯಮಿಯಾದ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ 79,300 ಕೋಟಿ ಸಂಪತ್ತು ಹೊಂದುವ ಮೂಲಕ ದೇಶದ ಐದನೇ ಶ್ರೀಮಂತ ಉದ್ಯಮಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದ: ಕಮಲ್ ಹಾಸನ್ ಘೋಷಣೆ