Publish Date: Tue, 26 Sep 2017 (15:26 IST)
Updated Date: Tue, 26 Sep 2017 (15:28 IST)
ಒಂದು ವೇಳೆ ಅಗತ್ಯವಾದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದ ಎಂದು ತಮಿಳು ಚಿತ್ರರಂಗದ ಮೆಗಾ ಸ್ಟಾರ್ ಕಮಲ್‌ಹಾಸನ್ ಹೇಳಿದ್ದಾರೆ.
ರಾಜಕೀಯದಲ್ಲಿ ಯಾವ ಪಕ್ಷವು ಶತ್ರುವಲ್ಲ. ಅನಿವಾರ್ಯವಾದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ರಾಜ್ಯದ ಜನತೆಯ ಹಿತಾಸಕ್ತಿಗಾಗಿ ಯಾವುದೇ ಮೈತ್ರಿಗೆ ಸಿದ್ದವಾಗಿದ್ದೇನೆ. ನಮಗೆ ರಾಜ್ಯದ ಜನತೆಯ ಹಿತ ಮುಖ್ಯವೇ ಹೊರತು ಯಾವುದೇ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎನ್ನುವ ಉಹಾಪೋಹ ವರದಿಗಳ ಮುಂಚೆಯೇ ಕಮಲ್ ಹಾಸನ್ ಮುಂದಿನ 100 ದಿನಗಳೊಳಗಾಗಿ ಹೊಸ ಪಕ್ಷಕ್ಕೆ ಚಾಲನೆ ನೀಡುವುದಾಗಿ ಪಂಚಭಾಷಾ ನಟ ಕಮಲ್ ಹಾಸನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.