Select Your Language

Notifications

webdunia
webdunia
webdunia
webdunia

ಹೆಲ್ಮೆಟ್ ಧರಿಸದಿದ್ದೇ ಸುಂದರ ಯುವತಿ ಸಾವಿಗೆ ಕಾರಣವಾಯ್ತು

ಹೆಲ್ಮೆಟ್ ಧರಿಸದಿದ್ದೇ ಸುಂದರ ಯುವತಿ ಸಾವಿಗೆ ಕಾರಣವಾಯ್ತು
ಪುಣೆ , ಭಾನುವಾರ, 15 ಅಕ್ಟೋಬರ್ 2017 (08:19 IST)
ಪುಣೆ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಯುವತಿ ಮೃತಪಟ್ಟಿರುವ ಘಟನೆ ಎರವಾಡದ ಶಾಸ್ತ್ರಿನಗರ ಚೌಕ್ ನಲ್ಲಿ ನಡೆದಿದೆ.

ವಾಡ್ಗನ್ಷೇರಿಯ ಸೈನಿಕನಗರದ ನಿವಾಸಿ, ಬ್ಯಾಂಕ್ ಉದ್ಯೋಗಿಯಾಗಿದ್ದ ಭಾಗ್ಯಶ್ರೀ ರಮೇಶ್ ನಾಯರ್(25) ಮೃತ ಯುವತಿ.

ಭಾಗ್ಯಶ‍್ರೀ ಗಲ್ಫ್ ಕ್ಲಬ್ ರೋಡ್ ನಿಂದ ಬರುತ್ತಿದ್ದರು. ಎರವಾಡ ಪೊಲೀಸ್ ಠಾಣೆ ಬಳಿ ಲೆಫ್ಟ್ ಟರ್ನ್ ತೆಗೆದುಕೊಂಡು ಶಾಸ್ತ್ರಿನಗರ ಚೌಕ್ ನಲ್ಲಿ ರೆಡ್ ಸಿಗ್ನಲ್ ಬಿದ್ದಿದೆ. ನಂತರ ಹಸಿರು ಸಿಗ್ನಲ್ ಬಿದ್ದಾಗ, ಸ್ಕೂಟರ್ ಚಾಲನೆ ಮಾಡಿದ್ದಾರೆ. ತನ್ನ ಎಡಭಾಗದಲ್ಲಿ ತುಂಬಾ ವಾಹನಗಳಿದ್ದ ಪರಿಣಾಮ ಗಲಿಬಿಲಿಗೊಂಡ ಭಾಗ್ಯಶ್ರೀ ಕೆಳಗೆ ಬಿದ್ದು ಟ್ರಕ್ ಕೆಳಗೆ ಸಿಲುಕಿ ಮೃತಪಟ್ಟಿರುವುದಾಗಿ ಎರವಾಡ ಠಾಣೆ ಎಸ್ಐ ರಾಜೇಂದ್ರ ಕಾಂಬ್ಳೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳು: ವಿನಯ್ ಕುಲಕರ್ಣಿ