Publish Date: Sat, 14 Oct 2017 (19:10 IST)
Updated Date: Sat, 14 Oct 2017 (19:12 IST)
ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳಿದ್ದಂತೆ ಎಂದು ಮತ್ತೊಬ್ಬ ಸಚಿವ ವಿನಯ್ ಕುಲಕರ್ಣಿ ನಾಲಿಗೆ ಹರಿಬಿಟ್ಟಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಮತ್ತು ಜೋಷಿ ಗೊಡ್ಡೆಮ್ಮೆಗಳಿದ್ದಂತೆ, ಹಾಲು ನೀಡುವುದಿಲ್ಲ, ಹೆರುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವ ರೋಷನ್‌ಬೇಗ್ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಪದಗಳನ್ನು ಬಳಸಿರುವುದು, ಬೇಗ್ ವಿರುದ್ಧ ಅದೇ ಪದಗಳನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರಯೋಗಿಸಿರುವ ವಿಚಾರ ಹಸಿರಾಗಿರುವಂತೆಯೇ ಸಚಿವ ಕುಲಕರ್ಣಿ ಅಸಭ್ಯ ಹೇಳಿಕೆ ಹೊರಬಿದ್ದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.