Publish Date: Sat, 14 Oct 2017 (16:55 IST)
Updated Date: Sat, 14 Oct 2017 (16:58 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಮುಗಿಸಲು ಬಿಜೆಪಿ ನಾಯಕರೇ ಸಾಕು ಎಂದು ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಬೇರೆ ರಾಜಕೀಯ ಪಕ್ಷಗಳಲ್ಲಿ ಶತ್ರುಗಳಿಲ್ಲ. ಅವರದೇ ಪಕ್ಷದಲ್ಲಿ ಶತ್ರುಗಳಿದ್ದಾರೆ. ಬಿಜೆಪಿಯವರಿಂದಲೇ ಬಿಎಸ್‌ವೈಗೆ ಆತಂಕ ಎದುರಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪರನ್ನು ಈಗಾಗಲೇ ಅರ್ಧ ಮುಗಿಸಿದ್ದಾರೆ. ಇನ್ನುಳಿದ ಅರ್ಧವನ್ನು ಸಂತೋಷ್ ಮುಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಶ್ವರಪ್ಪ ಮತ್ತು ಸಂತೋಷ್‌ರಿಂದಾಗಿ ಯಡಿಯೂರಪ್ಪ ಮುಂದೆ ಯಾವತ್ತೂ ಮುಖ್ಯಮಂತ್ರಿಯಾಗುವುದಿಲ್ಲ. ಅವರ ಮುಖ್ಯಮಂತ್ರಿಯಾಗುವ ಕನಸು ಈಡೇರುವುದಿಲ್ಲ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಭವಿಷ್ಯ ನುಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.