Select Your Language

Notifications

webdunia
webdunia
webdunia
webdunia

ಸಚಿವ ರೋಷನ್‌ಬೇಗ್‌ ನಾಲಾಯಕ್: ಜಗದೀಶ್ ಶೆಟ್ಟರ್

webdunia
ಬೆಂಗಳೂರು , ಶನಿವಾರ, 14 ಅಕ್ಟೋಬರ್ 2017 (14:26 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ ಸಚಿವ ರೋಷನ್ ಬೇಗ್ ಒಬ್ಬ ನಾಲಾಯಾಕ್ ಮಂತ್ರಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ದೇಶಕ್ಕಾಗಿ 24 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿರುವ ದೇಶದ ಪ್ರಧಾನಿಯ ವಿರುದ್ಧ ಅಸಭ್ಯ ಪದವನ್ನು ಬಳಸುವ ಸಚಿವ ರೋಷನ್ ಬೇಗ್ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಎಂತಹ ಪದಗಳ ಬಳಕೆ ಮಾಡುತ್ತಾರೆ? ಎಂದು ಕಿಡಿಕಾರಿದ್ದಾರೆ.
 
ಸಚಿವ ಬೇಗ್ ಪದ ಬಳಕೆಯನ್ನು ನೋಡಿದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಕ್ರತಿ ಎಂತಹದು ಎನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷ ಸಂಸ್ಕ್ರತಿ ಹೀನ ಪಕ್ಷವಾಗಿದೆ ಎಂದು ಟೀಕಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಕೂಡಲೇ ಸಚಿವ ಸಂಪುಟದಿಂದ ರೋಷನ್‌ಬೇಗ್‌ ಅವರನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ಆರಂಭಿಸುತ್ತೇವೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯೋಗೇಶ್ವರ್ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಿಲ್ಲ: ಡಿಕೆಶಿ