Publish Date: Sat, 14 Oct 2017 (18:59 IST)
Updated Date: Sat, 14 Oct 2017 (19:04 IST)
ಮಂಗಳೂರು: ಕಿಡಿಗೇಡಿಗಳು ಶಾಸಕ ಬಿ.ಮೊಯಿದ್ದೀನ್ ಬಾವ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿರುವ ಘಟನೆ ನಡೆದಿದೆ.
ಕಾಂಕ್ರೀಟ್ ರಸ್ತೆಗೆ 12 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಶಾಸಕರ ವಿಶೇಷ ಮುತವರ್ಜಿಯಿಂದ ಪಡೆದ ಅನುದಾನದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳೀಯ ನಾಗರಿಕರು ಹಾಗೂ ಬೆಂಬಲಿಗರು, ಕೈಗಾರಿಕೋದ್ಯಮಿಗಳು ಮೊಯಿದ್ದೀನ್ ಬಾವಗೆ ಅಭಿನಂದನೆ ಸಲ್ಲಿಸಲು ಫ್ಲೆಕ್ಸ್ ಹಾಕಿದ್ದರು.
ಆದರೆ ಕಿಡಿಗೇಡಿಗಳು 4 ಫ್ಲೆಕ್ಸ್ ಬೋರ್ಡ್‌ಗಳನ್ನು ಹರಿದು ಹಾಕಿದ್ದಾರೆ. ಪದೇಪದೇ ಬ್ಯಾನರ್ ಹರಿದು ಹಾಕುತ್ತಿದ್ದು, ಕೃತ್ಯವೆಸಗಿರುವವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಶಾಸಕ ಮೊಹಯುದ್ದೀನ್ ಬಾವ ಆಪ್ತ ಹ್ಯಾರಿಸ್ ಬೈಕಂಪಾಡಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.