Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ತಪ್ಪೊಪ್ಪಿಕೊಂಡರೆ ಅವರಿಗೆ ಸೆಲ್ಯೂಟ್ ಮಾಡ್ತಾರಂತೆ ಕಮಲ್ ಹಾಸನ್

ಪ್ರಧಾನಿ ಮೋದಿ ತಪ್ಪೊಪ್ಪಿಕೊಂಡರೆ ಅವರಿಗೆ ಸೆಲ್ಯೂಟ್ ಮಾಡ್ತಾರಂತೆ ಕಮಲ್ ಹಾಸನ್
ಚೆನ್ನೈ , ಗುರುವಾರ, 19 ಅಕ್ಟೋಬರ್ 2017 (11:18 IST)
ಚೆನ್ನೈ: ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ನೋಟು ನಿಷೇಧ ಮಾಡಿ ಘೋಷಣೆ ಮಾಡಿದಾಗ  ಅದನ್ನುಬೆಂಬಲಿಸಿ ಟ್ವೀಟ್ ಮಾಡಿದ್ದ ನಟ ಕಮಲ್ ಹಾಸನ್ ಇದೀಗ ಅದನ್ನು ತಪ್ಪು ಎಂದು ಒಪ್ಪಿಕೊಂಡರೆ ಸಲಾಮ್ ಮಾಡುವುದಾಗಿ ಹೇಳಿದ್ದಾರೆ.

 
ರಾಜಕೀಯಕ್ಕೆ ಎಂಟ್ರಿಯಾಗಲು ಹೊರಟಿರುವ ಕಮಲ್ ಅಂದು ಪ್ರಧಾನಿ ಮೋದಿ ನೋಟು ನಿಷೇಧ ಬೆಂಬಲಿಸಿ ಟ್ವೀಟ್ ಮಾಡಿದ್ದರು. ‘ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿಗೆ ಸಲಾಮ್’ ಎಂದಿದ್ದರು.

ಇದೀಗ ವರಸೆ ಬದಲಿಸಿರುವ ಕಮಲ್, ಪ್ರಧಾನಿ ಮೋದಿ ತಾವು ಅಂದು ಕೈಗೊಂಡ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡರೆ ಎರಡನೇ ಸಲಾಮ್ ಹೊಡೆಯುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ನಂತರ ದೆಹಲಿ ಸ್ಥಿತಿ ಗಂಭೀರ