Publish Date: Tue, 17 Oct 2017 (10:02 IST)
Updated Date: Tue, 17 Oct 2017 (10:03 IST)
ಅಹಮ್ಮದಾಬಾದ್: ಗುಜರಾತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಮತ್ತು ನೆಹರೂ-ಗಾಂಧಿ ಕುಟುಂಬಕ್ಕೆ ನಡುಕ ಶುರುವಾಗುತ್ತದೆ ಎಂದು ಪ್ರಧಾನಿ ಮೋದಿ ಇಲ್ಲಿ ನಡೆದ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಗೆ ಗುಜರಾತ್ ಮತ್ತು ಗುಜರಾತ್ ಜನರನ್ನು ಕಂಡರಾಗದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಅವರಿಂದ ಇಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಅದಕ್ಕೇ ಗುಜರಾತ್ ನ ಅಭಿವೃದ್ಧಿ ಕಂಡರೆ ಅವರ ಕಣ್ಣು ಕುಕ್ಕುತ್ತದೆ. ಕಾಂಗ್ರೆಸ್ ದೇಶಕ್ಕೆ ಹಲವು ನಾಯಕರನ್ನು ಕೊಟ್ಟರೂ, ಅವರಿಗೆಲ್ಲಾ ಸುಳ್ಳುಗಳನ್ನು ಬಿತ್ತರಿಸುವುದೇ ಕೆಲಸ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ