ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರಕ್ಕೂ ಹಿಂದಿದ್ದ ಯುಪಿಎ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರೆಸ್ಸೆಸ್ ಭಾರತೀಯ ಮಜ್ದೂರ ಸಂಘದ ಅಧ್ಯಕ್ಷ ಸಜ ನಾರಾಯಣ್ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸರಕಾರದ ಆರ್ಥಿಕ ನಿಲುವುಗಳು ದೇಶಕ್ಕೆ ಮಾರಕವಾಗಿವೆ. ಬಡವರ ಮೇಲೆ ತೆರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಡವರು ಜೀವನ ಮಾಡುವುದು ಕಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಆರ್ಥಿಕತೆ, ಕಾರ್ಮಿಕರ ವಿಷಯಗಳಲ್ಲಿ ಮೋದಿ ಸರಕಾರಕ್ಕೂ ಯುಪಿಎ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಒಂದೇ ಆರ್ಥಿಕ ನಿಲುವು ಹೊಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಆರ್ಥಿಕ ಸುಧಾರಣೆಯಿಂದ ಶ್ರೀಮಂತರಿಗೆ ಮಾತ್ರ ಲಾಭವಾಗುತ್ತಿದೆ. ರೈತರು, ಬಡವರು ಸರಕಾರದ ನಿರ್ಧಾರಗಳಿಂದ ಕಂಗಾಲಾಗಿದ್ದಾರೆ ಎಂದು ಆರೆಸ್ಸೆಸ್ ಮುಖಂಡ ಸ.ಜ. ನಾರಾಯಣ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!