Select Your Language

Notifications

webdunia
webdunia
webdunia
webdunia

15 ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೇಟ್‌ಪಾಸ್ ನೀಡಿದ ಹೈಕಮಾಂಡ್

15 ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೇಟ್‌ಪಾಸ್ ನೀಡಿದ ಹೈಕಮಾಂಡ್
ಬೆಂಗಳೂರು , ಸೋಮವಾರ, 16 ಅಕ್ಟೋಬರ್ 2017 (15:15 IST)
ಕಾಂಗ್ರೆಸ್ ಪಕ್ಷದ ಹೈಕಮಾಂಡ್ 15 ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೇಟ್‌ಪಾಸ್ ನೀಡಿ ಭರ್ಜರಿ ಸರ್ಜರಿ ಮಾಡಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಿಸಿದೆ ಎನ್ನಲಾಗಿದೆ.
 
ಬಳ್ಳಾರಿ ನಗರದ ಜಿಲ್ಲಾಧ್ಯಕ್ಷರಾಗಿ ರಫೀಕ್, ರಾಮನಗರಕ್ಕೆ ಎಸ್.ಗಂಗಾಧರ, ಚಿಕ್ಕಬಳ್ಳಾಪುರಕ್ಕೆ ಕೇಶವರೆಡ್ಡಿ, ಚಿಕ್ಕೋಡಿಗೆ ಲಕ್ಷ್ಮಣ್ ಚಿಂಗಾಲೆ, ಬೆಳಗಾವಿ ವಿನಯ ನವಲಗತ್ತಿ, ಕೊಡಗು ಎಂ.ಬಿ.ಶಿವಮುದ್ದಪ್ಪ, ಬೆಂಗಳೂರು ಕೇಂದ್ರ ಜಿ.ಶೇಖರ್,  ದಕ್ಷಿಣ ಕನ್ನಡ ಕೆ. ಹರೀಶ್ ಕುಮಾರ್, ಬೀದರ್ ಬಸವರಾಜ್ ಜಾಬಶೆಟ್ಟಿ, ಉಡುಪಿ ಜನಾರ್ದನ, ಹುಬ್ಬಳ್ಳಿ ಅಲ್ತಾಫ್ ಹುಲ್ಲೂರ್, ಕಲಬುರಗಿ ಜಗದೇವ್ ಗುತ್ತೇದಾರ್, ಬೆಂಗಳೂರು ದಕ್ಷಿಣ ಕೃಷ್ಣಪ್ಪ, ಹಾವೇರಿ ಸಯ್ಯದ ಆಜಂ ಖಾದ್ರಿ, ಬೆಂಗಳೂರು ಉತ್ತರ ಎಂ.ರಾಜಕುಮಾರ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
 
ಕೆಪಿಸಿಸಿ ಕಾರ್ಯಕಾರಿ ಸಮಿತಿಗೆ 94 ನೂತನ ಸದಸ್ಯರನ್ನು ನೇಮಕಗೊಳಿಸಿದ್ದು,ಮುಂಬರುವ ಚುನಾವಣೆಗಾಗಿ ಹಗಲಿರಳು ಶ್ರಮಿಸುವಂತೆ ಎಐಸಿಸಿ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಸಿವು ಮುಕ್ತ ರಾಜ್ಯವೇ ಕಾಂಗ್ರೆಸ್ ಸರಕಾರದ ಗುರಿ: ಸಿಎಂ