Publish Date: Mon, 16 Oct 2017 (13:20 IST)
Updated Date: Mon, 16 Oct 2017 (13:22 IST)
ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ನಾನು ಮಾಡಿದ ಆರೋಪಗಳು ಸುಳ್ಳು ಎಂದಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುತ್ತೇನೆ ಎಂದಿದ್ದರು. ಇದೀಗ ಆರೋಪಗಳು ಸುಳ್ಳಾಗಿವೆ. ಏನ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಸಾಬೀತುಪಡಿಸಬೇಕಾಗಿದ್ದು ಅವರೇ. ಇದೀಗ ಆರೋಪ ಸುಳ್ಳಾಗಿದೆ. ಆರೋಪ ಸುಳ್ಳು ಎಂದು ಸಾಬೀತಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುವುದಾಗಿ ಹೇಳಿದ್ದರು ಇದೀಗ ನೇತುಹಾಕಿಕೊಳ್ಳುವಂತೆ ಹೇಳಿ ಎಂದು ಗುಡುಗಿದ್ದಾರೆ.
ನೇಣುಹಾಕಿಕೊಳ್ಳಿ ಎಂದು ನಾನು ಹೇಳಲ್ಲ. ಆದರೆ. ಬೇರೆಯವರ ಮೇಲೆ ಆರೋಪ ಮಾಡುವ ಮುನ್ನ ಯೋಚಿಸಬೇಕು. ಸುಳ್ಳು ಆರೋಪಗಳನ್ನು ಮಾಡುವುದರಿಂದ ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರ ಪಾರದರ್ಶಕವಾಗಿ ರೈತರ , ಜನತೆಯ, ಶೋಷಿತರ, ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯಂತೆ ಕೋಮುವಾದ ಹರಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.