Publish Date: Mon, 16 Oct 2017 (09:37 IST)
Updated Date: Mon, 16 Oct 2017 (09:44 IST)
ಬೆಂಗಳೂರು: ಐದನೇ ಆವೃತ್ತಿಯ ಬಿಗ್ ಬಾಸ್ ಗೆ ನಿನ್ನೆ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಒಟ್ಟು 17 ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಪರಿಚಯಿಸಿ ಒಬ್ಬೊಬ್ಬರನ್ನೇ ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಭಾರೀ ಕಲರ್ ಫುಲ್ ಆಗಿ ಮೂಡಿ ಬಂದ ಲಾಂಚಿಂಗ್ ಸೆರಮನಿಗೆ ಕಿಚ್ಚ ಎಷ್ಟು ಕಠಿಣ ಪರಿಶ್ರಮ ಪಟ್ಟಿದ್ದರು ಗೊತ್ತಾ? ಬರೋಬ್ಬರಿ 12 ಗಂಟೆ ತಡೆರಹಿತವಾಗಿ ಕಿಚ್ಚ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರಂತೆ.
ಲಾಂಚ್ ಸೆರಮನಿ ಟಿವಿಯಲ್ಲಿ ನೋಡಿದ ಮೇಲೆ ಅಂತೂ ತಾನು ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಯಿತು. ಚೆನ್ನಾಗಿ ಎಡಿಟ್ ಮಾಡಿದ್ದಾರೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ. 17 ಸ್ಪರ್ಧಿಗಳ ಸರಸ-ವಿರಸ ಇಂದಿನಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿನಿತ್ಯ ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ