Publish Date: Mon, 16 Oct 2017 (08:56 IST)
Updated Date: Mon, 16 Oct 2017 (09:04 IST)
ನವದೆಹಲಿ: ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ತನಗಿಂತ ದೊಡ್ಡ ನಟ ಎಂದು ಪ್ರಕಾಶ್ ರೈ ವಿವಾದವೆಬ್ಬಿಸಿದ್ದರು. ಇದೀಗ ಬಾಲಿವುಡ್ ನ ಇನ್ನೊಬ್ಬ ನಟ ಅದೇ ರೀತಿಯ ಮಾತಾಡಿದ್ದಾರೆ.
ವಿಶೇಷವೆಂದರೆ ಈ ಹೇಳಿಕೆ ನೀಡಿರುವುದು ಬಿಜೆಪಿಯವರೇ ಆದ ನಟ ಶತ್ರುಘ್ನಾ ಸಿನ್ಹಾ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಸಂದರ್ಶನವೊಂದರಲ್ಲಿ ಟಾಂಗ್ ಕೊಟ್ಟಿದ್ದ ಸಿನ್ಹಾ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
‘ಮೋದಿ ಒಬ್ಬ ಆಕ್ಷನ್ ಹೀರೋ’ ಎಂದು ಅವರು ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿ ಬಿಹಾರಕ್ಕೆ ಆಗಮಿಸಿದ್ದಾಗ ಶತ್ರುಘ್ನಾ ಸಿನ್ಹಾ ಬಂದಿರಲಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಅವರು ‘ಅದರಲ್ಲಿ ವಿವಾದವೇನೂ ಇಲ್ಲ. ನಾನು ದೇಶದ ಅತೀ ದೊಡ್ಡ ಆಕ್ಷನ್ ಹೀರೋ ಜತೆಗಿದ್ದೇನೆ. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನ್ನ ಕೈಗೆ ತಡವಾಗಿ ಬಂತಷ್ಟೇ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಹೇಳಿಕೆ ಇದೀಗ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ