Select Your Language

Notifications

webdunia
webdunia
webdunia
webdunia

ಪ್ರಧಾನಿ ವಿರುದ್ಧ ಅಸಭ್ಯ ಪದ ಬಳಕೆ: ಕ್ಷಮೆ ಕೋರಿದ ರೋಷನ್ ಬೇಗ್

ಪ್ರಧಾನಿ ವಿರುದ್ಧ ಅಸಭ್ಯ ಪದ ಬಳಕೆ: ಕ್ಷಮೆ ಕೋರಿದ ರೋಷನ್ ಬೇಗ್
ಬೆಂಗಳೂರು , ಶನಿವಾರ, 14 ಅಕ್ಟೋಬರ್ 2017 (11:40 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರೋಷನ್ ಬೇಗ್ ಕ್ಷಮೆಯಾಚಿಸಿದ್ದಾರೆ.

ಸದ್ಯ ಪ್ರಧಾನಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ವಿವಾದದಲ್ಲಿ ಸಿಲುಕಿರುವ ವಕ್ಫ್ ಸಚಿವ ರೋಷನ್ ಬೇಗ್, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ.ದೇಶದ ಪ್ರಧಾನಿ ಮೋದಿ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದ ರೋಷನ್ ಬೇಗ್ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಬೇಗ್ ವಿರುದ್ಧ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
webdunia

ನಾನು ಎಂದಿಗೂ ಅಂತಹ ಪದ ಬಳಸುವುದಿಲ್ಲ.  ನಮ್ಮ ಪ್ರಧಾನಿ ವಿರುದ್ಧ ಅಂತಹ ಪದ ಬಳಕೆ ಮಾಡಿಲ್ಲ. ಬಿಜೆಪಿಗೆ ಯಾವುದೇ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶವಿಲ್ಲದೆ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಪದಗಳಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಯಾರಿಗೂ ಅಗೌರವ ಸೂಚಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಕ್ಕೆ ಪ್ರಣಬ್ ಮುಖರ್ಜಿ ಮುನಿಸಿಕೊಂಡಿದ್ದರಂತೆ