Publish Date: Sat, 14 Oct 2017 (10:29 IST)
Updated Date: Sat, 14 Oct 2017 (10:31 IST)
ನವದೆಹಲಿ: ಯುಪಿಎ ಅಧಿಕಾರಾವಧಿಯಲ್ಲಿ ಮನಮೋಹನ್ ಸಿಂಗ್ ಎರಡು ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಪ್ರಧಾನಿಯಾಗುವುದು ಇನ್ನೊಬ್ಬ ಹಿರಿಯ ಕಾಂಗ್ರೆಸ್ಸಿಗ ಪ್ರಣಬ್ ಮುಖರ್ಜಿಗೆ ಅಸಮಾಧಾನ ತಂದಿತ್ತಂತೆ.
ಹಾಗಂತ ಪ್ರಣಬ್ ಮುಖರ್ಜಿಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸ್ವತಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಪ್ರಣಬ್ ಗೆ ನಾನು ಪ್ರಧಾನಿಯಾಗುವುದು ಇಷ್ಟವಿರಲಿಲ್ಲ. ಯಾಕೆಂದರೆ ಅವರಿಗೆ ನನಗಿಂತ ಹೆಚ್ಚು ಅರ್ಹತೆಯಿತ್ತು.
ಹಾಗಿದ್ದರೂ ನಾನು ಅನಿವಾರ್ಯತೆಗೆ ಸಿಲುಕಿದ್ದೆ. ಅದು ಪ್ರಣಬ್ ಗೂ ಗೊತ್ತಿತ್ತು. ಅದಕ್ಕೇ ಅವರು ನನ್ನ ಮೇಲೆ ಮುನಿಸಿಕೊಳ್ಳಲಿಲ್ಲ. ನಮ್ಮ ನಡುವಿನ ಆತ್ಮೀಯತೆ ಹಾಗೆಯೇ ಮುಂದುವರಿದಿತ್ತು ಎಂದು ಮನಮೋಹನ್ ಸಿಂಗ್ ಪ್ರಣಬ್ ಎದುರೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ