Select Your Language

Notifications

webdunia
webdunia
webdunia
webdunia

ಆಧಾರ್ ನಿಂದ ಭಾರತಕ್ಕೆ 900 ಕೋಟಿ ಡಾಲರ್ ಉಳಿತಾಯ: ನಂದನ್ ನಿಲೇಕಣಿ

Aadhaar
ಅಮೆರಿಕಾ , ಶುಕ್ರವಾರ, 13 ಅಕ್ಟೋಬರ್ 2017 (20:47 IST)
ಅಮೆರಿಕಾ: ಆಧಾರ್‌ ಕಾರ್ಡ್‌ ಯೋಜನೆಯಿಂದ ಭಾರತ ಸರ್ಕಾರಕ್ಕೆ 900 ಕೋಟಿ ಡಾಲರ್‌ ಉಳಿತಾಯವಾಗಿದೆ ಎಂದು ಆಧಾರ್‌ ರೂವಾರಿ ನಂದನ್‌ ನಿಲೇಕಣಿ ಹೇಳಿದ್ದಾರೆ.

ಅಭಿವೃದ್ಧಿಗಾಗಿ ಡಿಜಿಟಲ್‌ ಎಕಾನಮಿ ಕುರಿತು ವಿಶ್ವ ಬ್ಯಾಂಕ್‌ ಮಂಡಳಿ ಚರ್ಚೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಅಂದಿನ ಯುಪಿಎ ಸರ್ಕಾರ ಆರಂಭಿಸಿದ ಆಧಾರ್ ನೋಂದಣಿ ಯೋಜನೆ ನಿಜಕ್ಕೂ ದ್ವಿಪಕ್ಷೀಯ ವಿಷಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಂಬಲದಿಂದ ಆಧಾರ್ ದೇಶದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನೂರು ಕೋಟಿಗೂ ಅಧಿಕ ಜನರು ಇಂದು ಆಧಾರ್ ನೋಂದಣಿ ಮಾಡಿಸಿದ್ದಾರೆ ಎಂದರು.

ಅಭಿವೃದ್ದಿಶೀಲ ದೇಶಗಳಿಗೆ ಮಹತ್ತರ ಆರ್ಥಿಕ ಅಭಿವೃದ್ಧಿ ಸಾಧಿಸುವುದಕ್ಕೆ ಡಿಜಿಟಲ್‌ ಮೂಲ ಸೌಕರ್ಯ ರೂಪಿಸುವುದೇ ಹೆಚ್ಚು ಸೂಕ್ತ ಮತ್ತು ಸುಲಭ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಯುವಪಡೆಯೊಂದಿಗೆ ನಿಖಿಲ್, ಪ್ರಜ್ವಲ್ ಚುನಾವಣಾ ಪ್ರಚಾರಕ್ಕೆ