Select Your Language

Notifications

webdunia
webdunia
webdunia
webdunia

ಯುವಪಡೆಯೊಂದಿಗೆ ನಿಖಿಲ್, ಪ್ರಜ್ವಲ್ ಚುನಾವಣಾ ಪ್ರಚಾರಕ್ಕೆ

ಯುವಪಡೆಯೊಂದಿಗೆ ನಿಖಿಲ್, ಪ್ರಜ್ವಲ್ ಚುನಾವಣಾ ಪ್ರಚಾರಕ್ಕೆ
ಬೆಂಗಳೂರು , ಶುಕ್ರವಾರ, 13 ಅಕ್ಟೋಬರ್ 2017 (20:09 IST)
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮತ್ತು ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಜತೆಯಾಗಿ ಚುನಾವಣೆ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ನಟರಾಗಿರುವ ನಿಖಿಲ್ ಸ್ಟಾರ್‌ ಪ್ರಚಾರಕರಾಗಿ ರಾಜ್ಯದಾದ್ಯಂತ ಪ್ರಚಾರ ಮಾಡಲಿದ್ದಾರೆ. ಅವರೊಂದಿಗೆ ಪ್ರಜ್ವಲ್ ಕೂಡಾ ಸಾಥ್ ನೀಡಲಿದ್ದಾರೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
 
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಶ್ರಾಂತಿಯ ಅಗತ್ಯವಾಗಿರುವುದರಿಂದ ಅವರ ಸ್ಥಾನವನ್ನು ತುಂಬಲು ಅವರ ಪುತ್ರರಾದ ನಿಖಿಲ್‌ಗೆ ಚುನಾವಣೆ ಪ್ರಚಾರದ ಹೊಣೆ ಹೊರಿಸಲಾಗುತ್ತಿದೆ.
 
ಯುವಕರನ್ನು ಆಕರ್ಷಿಸಲು ಇಬ್ಬರು ನಾಯಕರು ಯುವ ಪಡೆಯೊಂದಿಗೆ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಎನ್ ಯು ಕ್ಯಾಂಪಸ್ ನಲ್ಲಿ ಆತಂಕ ಸೃಷ್ಟಿಸಿದ ಹಾವು