Publish Date: Fri, 13 Oct 2017 (19:07 IST)
Updated Date: Fri, 13 Oct 2017 (19:11 IST)
ಎಚ್.ಡಿ.ದೇವೇಗೌಡ ಮೊಮ್ಮಗ ಪ್ರಜ್ವಲ್ ಹೇಳಿಕೆಯಿಂದ ಅಲ್ಲೋಲ ಕಲ್ಲೋಲವಾಗಲು ಆತನೇನು ಶಾಸಕನೇ, ಸಂಸದನೇ, ಸಚಿವನೇ ಎಂದು ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಕಾರ್ಯಕ್ರಮದಲ್ಲಿ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್, ಜೆಡಿಎಸ್‌ನಲ್ಲಿ ಕೆಲ ಬಕೆಟ್‌ಗಳಿದ್ದಾರೆ. ನಾನು ಮುಂದೆ ಬಂದಲ್ಲಿ ಅವರ ಆಟ ನಡೆಯೋಲ್ಲ ಎನ್ನುವ ಕಾರಣಕ್ಕೆ ನನ್ನ ವಿರುದ್ಧ ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪ್ರಜ್ವಲ್‌ಗೆ ಚುನಾವಣೆ ನಿಲ್ಲಬೇಕು ಎನ್ನುವ ಮಹಾದಾಸೆಯಿತ್ತು. ಆದರೆ, ಚುನಾವಣೆಗೆ ನಿಲ್ಲಲು ಸಾಧ್ಯವಾಗುವುದಿಲ್ಲ ಎನ್ನುವ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾನೆ. ಕೆಲ ಹುಡುಗರಿಂದ ಪ್ರೇರಿತನಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.