Publish Date: Sun, 15 Oct 2017 (15:46 IST)
Updated Date: Sun, 15 Oct 2017 (15:48 IST)
ಗುರುದಾಸ್‌ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದೆ.
ಹಿರಿಯ ನಟ ಸಂಸದ ವಿನೋದ್ ಖನ್ನಾ ಸಾವಿನಿಂದ ತೆರವಾಗಿದ್ದ ಗುರುದಾಸ್‌ಪುರ್ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ ಅವರು 1 ಲಕ್ಷ 92 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಜಾಖರ್ 4.57 ಲಕ್ಷ ಮತಗಳಿಸಿದ್ದರೆ, ಬಿಜೆಪಿ-ಅಕಾಲಿ ಮೈತ್ರಿಕೂಟ ಸ್ವರನ್ ಸಲಾರಿಯಾ ಅಭ್ಯರ್ಥಿ 2.74 ಲಕ್ಷ ಮತಗಳನ್ನು ಮಾತ್ರ ಗಳಿಸಿ ಸೋಲನುಭವಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮೇಜರ್ ಸುರೇಶ್ ಕುಮಾರ್ ಖಜುರಿಯಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.