Select Your Language

Notifications

webdunia
webdunia
webdunia
webdunia

ನಮ್ಮದು ಕಾರ್ಯಕರ್ತರ ಪಕ್ಷ ವಂಶಾಡಳಿತ ಪಕ್ಷವಲ್ಲ: ಪ್ರಧಾನಿ ಮೋದಿ

ನಮ್ಮದು ಕಾರ್ಯಕರ್ತರ ಪಕ್ಷ ವಂಶಾಡಳಿತ ಪಕ್ಷವಲ್ಲ: ಪ್ರಧಾನಿ ಮೋದಿ
ವಡೋದರಾ , ಸೋಮವಾರ, 16 ಅಕ್ಟೋಬರ್ 2017 (17:23 IST)
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆಯೇ ಹೊರತು ವಂಶಾಡಳಿತ ಪಕ್ಷವಾಗಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿ ಪರ ಅಲೆಯಿದೆ. ನನಗೆ ಕಾರ್ಯಕರ್ತರ ಸಾಮರ್ಥ್ಯದ ಮೇಲೆ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
 
ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ನಡುಕ ಉಂಟಾಗಿದೆ. ರಾಜ್ಯದಲ್ಲಿ 150 ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಬಿಜೆಪಿ ಪಕ್ಷಕ್ಕೆ ಮತ್ತೆ ಗುಜರಾತ್ ಜನತೆಯ ಆಶೀರ್ವಾದ ಅಗತ್ಯವಾಗಿದೆ. ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕರಿಸಿ ಎಂದು ಪ್ರಧಾನಿ ಮೋದಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಿನೋಟಿಫಿಕೇಶನ್: ಬಿಜೆಪಿಯಿಂದ ಸಿಎಂ ಸಿದ್ರಾಮಯ್ಯ ವಿರುದ್ಧ ಎಸಿಬಿಗೆ ದೂರು