Select Your Language

Notifications

webdunia
webdunia
webdunia
webdunia

ಪ್ರಭಾಸ್ ಮದುವೆ ಬಗ್ಗೆ ಬಾಯ್ಬಿಟ್ಟ ಸಹೋದರಿ ಪ್ರಗತಿ

ಪ್ರಭಾಸ್ ಮದುವೆ ಬಗ್ಗೆ ಬಾಯ್ಬಿಟ್ಟ ಸಹೋದರಿ ಪ್ರಗತಿ
ಹೈದ್ರಾಬಾದ್ , ಬುಧವಾರ, 9 ಆಗಸ್ಟ್ 2017 (13:23 IST)
ಬಾಹುಬಲಿ ಎರಡೂ ಚಿತ್ರಗಳ ಯಶಸ್ಸಿನ ಬಳಿಕ ತೆಲುಗಿನ ಖ್ಯಾತ ನಟ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಐಕಾನ್ ಅಗಿದ್ದಾರೆ. ಇದೀಗ, ಬಾಹುಬಲಿಯ ಮುಂದಿನ ಚಿತ್ರಕ್ಕಿಂತ ಻ವರ ಮದುವೆ ಕುರಿತಂತೆಯೇ ಹೆಚ್ಚು ಕುತೂಹಲ ವ್ಯಕ್ತವಾಗುತ್ತಿದೆ.

ಅನುಷ್ಕಾ ಶೆಟ್ಟಿ ಜೊತೆಗಿನ ತೆರೆ ಮೇಲಿನ ಕೆಮಿಸ್ಟ್ರೀ ಕಂಡು ನಿಜ ಜೀವನದಲ್ಲೂ ಒಂದಾಗುತ್ತಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ, ಆ ಊಹಾಪೋಹಗಳಿಗೆ ಸ್ವತಃ ಪ್ರಭಾಸ್ ತೆರೆ ಎಳೆದಿದ್ದಾರೆ. ಬಳಿಕ ಉದ್ಯಮಿಯೊಬ್ಬರ ಮೊಮ್ಮಗಳನ್ನ ಪ್ರಭಾಸ್ ಕೈಹಿಡಿಯುತ್ತಿದ್ದಾರೆ ಎಂಬ ಸುದ್ದಿಗಳೂ ಹರಡಿದ್ದವು. ಆದರೆ, ಎಲ್ಲವೂ ಊಹಾಪೋಹಗಳಷ್ಟೆ. ಇದೀಗ, ಪ್ರಭಾಸ್ ಸಹೋದರಿ ಅಣ್ಣನ ಮದುವೆ ಬಗ್ಗೆ ಮಾತನಾಡಿದ್ದಾರೆ.

ನಾವು ಅಣ್ಣನ ಮದುವೆ ಬಗ್ಗೆ ತುಂಬಾ ಕುತೂಹಲದಿಂದ ಕಾಯುತ್ತಿದ್ದೇವೆ. ನಾವು ಅವರ ಮದುವೆಯಲ್ಲಿ ಒಳ್ಳೆಯ ಕಾಲ ಕಳೆದು, ಎಂಜಾಯ್ ಮಾಡುತ್ತೇವೆ. ಆದರೆ, ಸದ್ಯಕ್ಕೆ ಪ್ರಭಾಸ್ ಮದುವೆಯಾಗುತ್ತಿಲ್ಲ. ಅವರ ಕರಿಯರ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಸೋದರ ಸಂಬಂದಿಗಳು ಮಾತ್ರ ಅವರ ಮದುವೆಗೆ ದೊಡ್ಡ ಪ್ಲಾನ್ ಇಟ್ಟುಕೊಂಡಿದ್ದಾರೆ ಎಂದು ಸಹೋದರಿ ಪ್ರಗತಿ ಉಪ್ಪಾಲಪತಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?