Publish Date: Sun, 06 Aug 2017 (11:25 IST)
Updated Date: Sun, 06 Aug 2017 (11:29 IST)
ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಅವರೇ ಉತ್ತರಿಸಿದ್ದಾರೆ.
ಅವರ ಕುಟುಂಬದವರು ಹುಡುಗಿ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಕುಟುಂಬದ ಹುಡುಗಿಯನ್ನು ಪ್ರಭಾಸ್ ವರಿಸುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು.
ಇದರಿಂದ ಅವರ ಮಹಿಳಾ ಅಭಿಮಾನಿಗಳು ಅದೆಷ್ಟು ಬೇಜಾರು ಮಾಡಿಕೊಂಡಿದ್ದರೋ. ಆದರೆ ಅವರೆಲ್ಲಾ ಇನ್ನು ಚಿಂತೆ ಮಾಡಬೇಕಿಲ್ಲವಂತೆ. ಹಾಗಂತ ಪ್ರಭಾಸ್ ಅಭಯ ಕೊಟ್ಟಿದ್ದಾರೆ. ನಾನು ಸದ್ಯಕ್ಕೆ ಮದುವೆಯಾಗುತ್ತಿಲ್ಲ. ಆ ಬಗ್ಗೆ ಯೋಚನೆ ಕೂಡಾ ಮಾಡುತ್ತಿಲ್ಲ. ಹೀಗಾಗಿ ನನ್ನ ಮಹಿಳಾ ಅಭಿಮಾನಿಗಳು ಸಂತೋಷಪಡಬಹುದು. ಇಷ್ಟೊಂದು ಅಭಿಮಾನಿಗಳು ಇಷ್ಟಪಡುತ್ತಿರುವುದೇ ನನಗೆ ಖುಷಿ ಎಂದಿದ್ದಾರೆ.