Select Your Language

Notifications

webdunia
webdunia
webdunia
webdunia

ರಾಜಮೌಳಿ ಬಾಹುಬಲಿ-3 ಎಂದಿದ್ದಕ್ಕೆ ಪ್ರಭಾಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ರಾಜಮೌಳಿ ಬಾಹುಬಲಿ-3 ಎಂದಿದ್ದಕ್ಕೆ ಪ್ರಭಾಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?
ಹೈದ್ರಾಬಾದ್ , ಶುಕ್ರವಾರ, 23 ಜೂನ್ 2017 (18:36 IST)
ಬಾಹುಬಲಿ ಭಾಗ-1 ಮತ್ತು 2ರ ಯಶಸ್ಸಿನ ಬಳಿಕ ಬಾಹುಬಲಿ-3 ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳಿಗೆ ಡೈರೆಕ್ಟರ್ ರಾಜಮೌಳಿ ಇತ್ತೀಚೆಗೆ ತೆರೆ ಎಳೆದಿದ್ದಾರೆ.

ಈ ಮಧ್ಯೆ, ಖಾಸಗಿ ಚಾನಲ್`ನ ಕಾರ್ಯಕ್ರಮವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಮತ್ತು ನಿರ್ದೇಶಕ ರಾಜಮೌಳಿ ಸರ್ ಪ್ರೈಸ್ ಆಗಿ ಪ್ರಭಾಸ್`ಗೆ ಕಾಲ್ ಮಾಡಿ ಬಾಹುಬಲಿ-3 ಮಾಡಬೇಕೆಂದು ರಾಜಮೌಳಿ ಹೇಳಿದರು.  ರಾಜಮೌಳಿ ಮಾತನ್ನ ಕೇಳಿ ಬೆಚ್ಚಿಬಿದ್ದ ಪ್ರಭಾಸ್ ಫೋನಿನಲ್ಲಿಯೇ `ಅಮ್ಮ ನೀಯಮ್ಮಾ’ ಎಂದು ಉದ್ಘರಿಸಿದರು.

ಇದನ್ನ ಕೇಳಿದ ಯಾರಿಗಾದರೂ ಪ್ರಭಾಸ್ ಆ ರೀತಿ ಹೇಳಿದ್ದು ಯಾಕೆ ಎಂಬುದು ಅರ್ಥವಾಗಿರುತ್ತೆ. ಬಾಹುಬಲಿ ಚಿತ್ರಕ್ಕೆ 5 ವರ್ಷ ಕಾಲ್ ಶೀಟ್ ಕೊಟ್ಟಿದ್ದ ಪ್ರಭಾಸ್ ಈ ಸಮಯದಲ್ಲಿ ಬೇರೆ ಏನೂ ಕೆಲಸ ಮಾಡಿಲ್ಲ. ಈ ಮಧ್ಯೆ ಕಠಿಣ ಡಯಟ್ ಮಾಡಿ ದೇಹವನ್ನ ಹುರಿಗೊಳಿಸಿದ್ದರು. ತಪಸ್ಸಿನ ರೀತಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಚಿತ್ರಕ್ಕಾಗಿ 5 ವರ್ಷ ಪಟ್ಟ ಶ್ರಮ ಆ ಪ್ರತಿಕ್ರಿಯೆಗೆ ಕಾರಣ. ಮತ್ತೊಂದು ಬಾಹುಬಲಿ ಸಿನಿಮಾ ಮಾಡಿದರೆ ಸತ್ತೇ ಹೋಗುತ್ತೇನೆಂದು ಹಿಂದೊಮ್ಮೆ ಪ್ರಭಾಸ್ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ನವದೆಹಲಿ
  

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಸ್ಟಾರ್ ನಟ ರಜನಿಕಾಂತ್ ಬಿಜೆಪಿಗೆ?