Publish Date: Fri, 30 Jun 2017 (12:54 IST)
Updated Date: Fri, 30 Jun 2017 (12:56 IST)
ಹೈದರಾಬಾದ್: ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಮನೆ ಮುಂದೆ ದೊಡ್ಡ ದೊಡ್ಡ ಡೈರಕ್ಟರ್ ಗಳ ಕ್ಯೂ ನಿಂತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸದ್ಯಕ್ಕೆ ‘ಸಾಹೋ’ ಎನ್ನುವ ಆಕ್ಷನ್ ಥ್ರಿಲ್ಲರ್ ಸಿನಿಮಾ ನಂತರ ಪ್ರಭಾಸ್ ಮುಂದೇನ್ಮಾಡ್ತಾರೆ ಎನ್ನುವುದು ಬಹಿರಂಗವಾಗಿದೆ.
ಬಾಲಿವುಡ್ ನ ದೊಡ್ಡ ನಿರ್ದೇಶಕರೊಬ್ಬರು ಪ್ರಭಾಸ್ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಅದೀಗ ನಿಜವಾಗಿದೆ. ಪ್ರಭಾಸ್ ಸಾಹೋ ಸಿನಿಮಾ ನಂತರ ಖ್ಯಾತ ನಿರ್ದೇಶಕ, ನಟ ಪ್ರಭುದೇವ ಜತೆ ಸಿನಿಮಾ ಮಾಡುವುದು ಪಕ್ಕಾ ಆಗಿದೆ.
‘ದುಡ್ಡು ಮಾಡಬಹುದು ಎನ್ನುವವ ಕಾರಣಕ್ಕೆ ಪ್ರಭಾಸ್ ಜತೆ ಸಿನಿಮಾ ಮಾಡುತ್ತಿಲ್ಲ. ಪ್ರಭಾಸ್ ಜತೆ ಸಿನಿಮಾ ಮಾಡಬೇಕು ಎಂದು ಅದೆಷ್ಟೋ ದಿನದಿಂದ ಕಾಯುತ್ತಿದ್ದೆ. ಸಾಹೋ ನಂತರ ಅದನ್ನು ಮಾಡಲಿದ್ದೇವೆ’ ಎಂದು ಪ್ರಭುದೇವ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ