Publish Date: Fri, 30 Jun 2017 (11:57 IST)
Updated Date: Fri, 30 Jun 2017 (11:59 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆ ಎಂದೇ ಗುರುತಿಸಿಕೊಂಡಿರುವ ಜಯರಾಮ್ ಕಾರ್ತಿಕ್ ಹೊಸ ಗೆಟಪ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಹಿಂದೊಮ್ಮೆ ಹಿಂದಿಯ ಸೀತಾ ಧಾರವಾಹಿಯಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದ ಜೆಕೆ ಈಗ ಢಮರು ಹಿಡಿದು ನಿಂತ ಶಿವನ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಇದ್ಯಾಕಪ್ಪಾ ಈ ಗೆಟಪ್ ಎಂದರೆ, ರಹಸ್ಯ ಬಯಲಾಗಿದೆ.
ಮತ್ತೊಂದು ಹಿಂದಿ ಧಾರವಾಹಿಗಾಗಿ ಜೆಕೆ ಹೊಸ ಗೆಟಪ್ ಹಾಕಿಕೊಂಡಿದ್ದಾರೆ. ಕನ್ನಡದಲ್ಲಿ ತನ್ನನ್ನು ಇಂತಹ ಐತಿಹಾಸಿಕ ಪಾತ್ರಗಳಿಗೆ ಸೂಕ್ತ ವ್ಯಕ್ತಿಯಲ್ಲ ಎಂದು ತಿರಸ್ಕರಿಸಿದ್ದಾರಲ್ಲಾ.. ಹಾಗಾಗಿ ಹಿಂದಿ ವಾಹಿನಿಯಲ್ಲಿ ಮಾತ್ರ ಇಂತಹ ಅವಕಾಶಗಳು ಸಿಗುವುದು ಎಂದು ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ