Publish Date: Fri, 30 Jun 2017 (09:28 IST)
Updated Date: Fri, 30 Jun 2017 (09:31 IST)
ಮುಂಬೈ: ಬಾಲಿವುಡ್ ನ ಅವಿವಾಹಿತ ನಟಿಯರಲ್ಲಿ ಟಬು ಕೂಡಾ ಒಬ್ಬರು. ಅವರಿಗೀಗ 45 ವರ್ಷ. ಇನ್ನೂ ಮದುವೆಯಾಗಿಲ್ಲ. ಅದಕ್ಕೆ ಕಾರಣ ಇನ್ನೊಬ್ಬ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅಂತೆ.
ಅದು ಹೇಗೆ? ಅಜಯ್ ಏನಾದ್ರೂ ಪ್ರೀತಿಸ್ತೀನಿ ಎಂದು ಹೇಳಿ ಕೈಕೊಟ್ಟಿದ್ನಾ ಅಂತ ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಹಾಗೆಲ್ಲ ಏನೂ ಅಲ್ಲ. ಆದರೂ ನನ್ನ ಸಿಂಗಲ್ ಸ್ಟೇಟಸ್ ಗೆ ಆತನೇ ಕಾರಣ ಎಂದಿದ್ದಾರೆ.
ಟಬು ಮತ್ತು ಅಜಯ್ ಬಾಲ್ಯ ಸ್ನೇಹಿತರು. ಅಕ್ಕ ಪಕ್ಕದ ಮನೆಯವರು. ಚಡ್ಡಿ ದೋಸ್ತುಗಳು. ಹೀಗಿರುವಾಗ ಚಿಕ್ಕಂದಿನಲ್ಲಿ ಯಾರಾದರೂ ಟಬು ತಂಟೆಗೆ ಬಂದರೆ ರೌಡಿಗಳಂತೆ ತೋಳೇರಿಸಿಕೊಂಡು ಹೋಗಿ ಚೆನ್ನಾಗಿ ತದುಕಿ ಬರುತ್ತಿದ್ದರಂತೆ ಅಜಯ್. ಹಾಗಾಗಿ ಯಾವ ಹೈಕಳೂ ಅವರ ಕಡೆ ತಲೆ ಎತ್ತಿ ನೋಡುತ್ತಿರಲಿಲ್ಲವಂತೆ.
ಇದೇ ಕಾರಣಕ್ಕೆ ತಾನು ಒಂದಟಿಯಾಗಿಯೇ ಉಳಿದುಕೊಂಡೆ ಎನ್ನುವುದು ಟಬು ಸ್ವೀಟಾದ ಕಂಪ್ಲೇಂಟ್. ಅಂದ ಹಾಗೆ ಇಬ್ಬರೂ ಹೊಸ ಚಿತ್ರವೊಂದರಲ್ಲಿ ಮತ್ತೆ ತೆರೆ ಮೇಲೆ ಜೋಡಿಯಾಗಿ ಮಿಂಚಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ