Select Your Language

Notifications

webdunia
webdunia
webdunia
webdunia

ಪ್ರಭಾಸ್ ಜತೆ ಲಿಂಕ್ ಅಪ್ ಮಾಡಿದ್ದಕ್ಕೆ ನಟಿ ಅನುಷ್ಕಾ ಶೆಟ್ಟಿ ಮಾಡಿದ್ದೇನು ಗೊತ್ತಾ?!

ಪ್ರಭಾಸ್ ಜತೆ ಲಿಂಕ್ ಅಪ್ ಮಾಡಿದ್ದಕ್ಕೆ ನಟಿ ಅನುಷ್ಕಾ ಶೆಟ್ಟಿ ಮಾಡಿದ್ದೇನು ಗೊತ್ತಾ?!
Mumbai , ಬುಧವಾರ, 31 ಮೇ 2017 (11:56 IST)
ಮುಂಬೈ: ಸಾಮಾನ್ಯವಾಗಿ ನಟಿಯರು ತಮ್ಮ ಹೆಸರು ಇನ್ಯಾವುದೋ ನಟರ ಹೆಸರಿನ ಜತೆ ಥಳಕು ಹಾಕಿಕೊಂಡರೆ ಏನು ಮಾಡುತ್ತಾರೆ? ಒಂದೋ ನಿರಾಕರಿಸಿ ಸುಮ್ಮನಾಗುತ್ತಾರೆ ಅಥವಾ ಏನೂ ಕಾಮೆಂಟ್ ಮಾಡದೇ ಸುಮ್ಮನಿದ್ದು ಬಿಡುತ್ತಾರೆ.

 
ಆದರೆ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಮಾತ್ರ ಗಾಸಿಪ್ ಹುಟ್ಟು ಹಾಕಿದವರ ಹುಟ್ಟಡಗಿಸಿದ್ದಾರೆ. ಹೌದು. ಅನುಷ್ಕಾ ತಮ್ಮ ಮತ್ತು ಬಾಹುಬಲಿ ಪ್ರಭಾಸ್ ಬಗ್ಗೆ ಇಲ್ಲ ಸಲ್ಲದ ಲಿಂಕ್ ಅಪ್ ಮಾಡಿದ ಗಾಸಿಪ್ ಮೂಲವನ್ನು ಹುಡುಕಿ ಜನ್ಮ ಜಾಲಾಡಿದ್ದಾರೆ.

ಅನುಷ್ಕಾ ಮತ್ತು ಪ್ರಭಾಸ್ ಈ ಹಿಂದೆಯೂ ಜತೆಯಾಗಿ ನಟಿಸಿದ್ದರು. ಆದರೆ ಯಾವತ್ತೂ ಬಾಹುಬಲಿ ಚಿತ್ರದಲ್ಲಿ ನಟಿಸಿದ ಮೇಲೆ ಆದ ಹಾಗೆ ಇವರಿಬ್ಬರ ಹೆಸರು ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಆ ರೀತಿ ಸುದ್ದಿ ಹಬ್ಬಿಸುತ್ತಿರುವವರು ಯಾರು ಎಂದು ಪತ್ತೆ ಮಾಡಿದ ಅನುಷ್ಕಾ ಸರಿಯಾಗಿ ಬೆಂಡೆತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ವತಮ್ಮ ನೆನೆದು ಕಣ್ಣೀರು ಹಾಕಿದ ಉಮಾಶ್ರೀ, ಸುಧಾರಾಣಿ