Publish Date: Mon, 13 Nov 2017 (17:17 IST)
Updated Date: Mon, 13 Nov 2017 (17:20 IST)
ನಾನೇ ಬಾಹುಬಲಿ ಎಂದು ಆನೆಯ ಮುಂದೆ ಸ್ಟಂಟ್ ಮಾಡಲು ಹೋದ ಭೂಪನೊಬ್ಬ ಸಕತ್ತಾಗಿ ಒದೆ ತಿಂದ ಘಟನೆ ನಡೆದಿದೆ.
ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ಆನೆಯ ಸೊಂಡಿಲಿನಿಂದ ಮೇಲಕ್ಕೆ ಏರಿ ಕೂಡುವಂತೆ, ತಾನೇನು ಕಮ್ಮಿಯಿಲ್ಲ ನಾನೇ ಬಾಹುಬಲಿ ಎನ್ನುತ್ತಾ ಆನೆಯ ಸೊಂಡಿಲಿನಿಂದ ಏರಲು ಪ್ರಯತ್ನಿಸಿದ್ದಾನೆ. ಕೂಡಲೇ ಆನೆ ಈ ನಕಲಿ ಬಾಹುಬಲಿಯನ್ನು ಎತ್ತಿ ಬಿಸಾಕಿದೆ.
ನಕಲಿ ಬಾಹುಬಲಿ ಮೂಳೆಗಳು ಮುರಿದು ಹೋಗಿದ್ದು, ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆತನನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಸಿನೆಮಾಗಳಲ್ಲಿ ಸ್ಟಂಟ್ ಮಾಡುವಂತೆ ನಿಜ ಜೀವನದಲ್ಲಿ ಮಾಡಲು ಹೋದರೆ ಯಾವ ಗತಿಯಾಗುತ್ತದೆ ಎನ್ನುವುದನ್ನು ಈ ಭೂಪನಿಂದ ನೋಡಿ ತಿಳಿಯಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.