Publish Date: Fri, 29 Dec 2017 (09:45 IST)
Updated Date: Fri, 29 Dec 2017 (09:48 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗಿರುವ ಸಚಿವ ರಮಾನಾಥ ರೈ ಮುಸ್ಲಿಮರ ಮತದಿಂದಲೇ 6 ಬಾರಿ ಬಂಟ್ವಾಳದಲ್ಲಿ ಶಾಸಕನಾದೆ ಎಂದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅವರಲ್ಲಿ ನಟ ಜಗ್ಗೇಶ್ ಕೂಡಾ ಒಬ್ಬರು. ನವರಸನಾಯಕ ಕೊಟ್ಟ ತಿರುಗೇಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಗೆ ಕಾರಣವಾಗಿದೆ.
‘ದಯಮಾಡಿ ಈಗಲೇ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು, ಮುಸಲ್ಮಾನರಿಗಾದರೂ ವಿಧೇಯರಾಗಿ, 5 ಬಾರಿ ನಮಾಜು ಶುರು ಮಾಡಿ! ಯಾವುದೇ ಕಾರಣಕ್ಕೂ ಹಿಂದೂಗಳ ಮತ ಕೇಳಬೇಡಿ. ನಿಮ್ಮ ಹೆಸರನ್ನು ರಸತ್ತುಲ್ಲಾ ಅಂತ ಬದಲಿಸಿಕೊಂಡು ಚೆನ್ನಾಗಿ ಬಾಳಿ..!’ ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ತಿರುಗೇಟು ಕೊಟ್ಟಿದ್ದರು.
ಇದಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಸ್ಲಿಮರ ಓಲೈಸಿದ ರಮಾನಾಥ ರೈಗೆ ಮುಟ್ಟಿಕೊಳ್ಳುವಂತೆ ಕೊಟ್ಟಿದ್ದಾರೆ ಜಗ್ಗೇಶ್ ಎಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ಸಖತ್ತಾಗಿ ಹೇಳಿದ್ರಿ ಸರ್ ಎಂದು ಚಪ್ಪಾಳೆ ತಟ್ಟಿದ್ದಾರೆ. ನಿನ್ನೆ ರಮಾನಾಥ ರೈ ಕಾರ್ಯಕ್ರಮವೊಂದರಲ್ಲಿ ಇಂತಹದ್ದೊಂದು ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ