Publish Date: Wed, 27 Dec 2017 (17:12 IST)
Updated Date: Wed, 27 Dec 2017 (17:21 IST)
ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ನೀರಿಗಾಗಿ ಹೋರಾಟ ತೀವ್ರವಾಗುತ್ತಿದ್ದರೆ, ಇತ್ತ ಫಿಲಂ ಚೇಂಬರ್ ನಲ್ಲಿ ಸಭೆ ಸೇರಿದ ಕನ್ನಡ ಸಿನಿ ಲೋಕದ ದಿಗ್ಗಜರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದೀಗಷ್ಟೇ ಫಿಲಂ ಚೇಂಬರ್ ನಲ್ಲಿ ಅಧ್ಯಕ್ಷ ಸಾ ರಾ ಗೋವಿಂದು ನೇತೃತ್ವದಲ್ಲಿ ಸಭೆ ನಡೆದಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ಶ್ರುತಿ, ಜಗ್ಗೇಶ್, ಮುಂತಾದವರು ರೈತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಮಹಾದಾಯಿ ನೀರಿಗಾಗಿ ಹೋರಾಟ ಮಾಡುತ್ತಿರುವ ರೈತರ ಜತೆ ಕೈ ಜೋಡಿಸಲು ಸ್ಯಾಂಡಲ್ ವುಡ್ ಸ್ಟಾರ್ ಗಳು ನಿರ್ಣಯ ಕೈಗೊಂಡಿದ್ದಾರೆ. ಕನ್ನಡ ನಾಡು ಕ್ಷೇಮವಾಗಿದ್ದರೆ ಮಾತ್ರ ನಾವು. ಹೋರಾಟಗಾರರ ಪರವಾಗಿ ನಿಲ್ಲಲಿದ್ದೇವೆ ಎಂದು ಜಗ್ಗೇಶ್ ಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನಟರಾದ ಶಿವರಾಜ್ ಕುಮಾರ್, ಯಶ್ ಮಹದಾಯಿ ಹೋರಾಟಕ್ಕೆ ಯಾವಾಗ ಬೇಕಾದರೂ ಹೋರಾಟಕ್ಕೆ ಬರಲು ಸಿದ್ಧ ಎಂದಿದ್ದರು. ಇದರ ನಡುವೆ ಆ ದಿನಗಳು ಖ್ಯಾತಿಯ ನಟ ಚೇತನ್ ಹೋರಾಟಕ್ಕೆ ಬಾರದ ಸ್ಯಾಂಡಲ್ ವುಡ್ ನಟರ ಬಗ್ಗೆ ಟೀಕೆ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ