Publish Date: Wed, 27 Dec 2017 (14:38 IST)
Updated Date: Wed, 27 Dec 2017 (14:46 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಪನ್ವೆಲ್ ಫಾರ್ಮ ಹೌಸ್ ನಲ್ಲಿ 52ನೇ ಹುಟ್ಟುಹಬ್ಬವನ್ನು ಇಂದು (ಬುಧವಾರ) ಆಚರಿಸಿಕೊಂಡಿದ್ದಾರೆ.
ಇವರು ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಟೈಗರ್ ಜಿಂದಾ ಹೈ ಚಿತ್ರ ತಂಡದ ಜೊತೆ ಆಚರಿಸಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್ ನ ನಟಿ ಕತ್ರಿನಾ ಕೈಪ್, ಹಾಗೆ ಹಿಮೇಶ್ ರಶ್ಮೀಯಾ ಸೇರಿದಂತೆ ಹಲವು ಬಾಲಿವುಡ್ ನ ನಟ-ನಟಿಯರು ಪಾಲ್ಗೊಂಡಿದ್ದರು.
ಸಲ್ಮಾನ್ ಖಾನ್ ಅವರು ನಟಿಸಿರುವ ಟೈಗರ್ ಜಿಂದಾ ಹೈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದು, ಬಿಡುಗಡೆಯಾದ ಮೂರೇ ದಿನದಲ್ಲಿ 100 ಕೋಟಿ ರೂ ಬಾಚಿಕೊಂಡಿತ್ತು. ಇನ್ನು ಕೆಲವೇ ದಿನಗಳಲ್ಲಿ 200 ಕೋಟಿ ರೂ ಗಳಿಸುವ ನಿರೀಕ್ಷೆಯಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ