Select Your Language

Notifications

webdunia
webdunia
webdunia
webdunia

ಸ್ಮಲಾನ್ ಖಾನ್ ಆದಾಯ ಕೇಳಿದ್ರೆ ಶಾಕ್ ಆಗ್ತಿರಿ ನೀವು

ಸ್ಮಲಾನ್ ಖಾನ್ ಆದಾಯ ಕೇಳಿದ್ರೆ ಶಾಕ್ ಆಗ್ತಿರಿ ನೀವು
ಮುಂಬೈ , ಶನಿವಾರ, 23 ಡಿಸೆಂಬರ್ 2017 (08:20 IST)
ಮುಂಬೈ: ಫೋರ್ಬ್ಸ್ ನಿಯತಕಾಲಿಕ ಭಾರತದಲ್ಲಿ ಅತೀ ಹೆಚ್ಚು ಆದಾಯ ಗಳಿಸುವ ತಾರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರು ಈ ವರ್ಷ ಬರೋಬ್ಬರಿ 232.83 ಕೋಟಿ ರೂಪಾಯಿ ಗಳಿಸಿ ಮೊದಲಸ್ಥಾನ ಪಡೆದುಕೊಂಡಿದ್ದಾರೆ.


ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್  ಅವರು ಈ ವರ್ಷ 170.5 ಕೋಟಿ ರೂಪಾಯಿ ಗಳಿಸುವುದರ ಮೂಲಕ ಎರಡನೇಯ ಸ್ಥಾನದಲ್ಲಿದ್ದರೆ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 100.72 ಕೋಟಿ ರೂ. ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ನ ನಟಿ ಪ್ರಿಯಾಂಕ ಚೊಪ್ರಾ ಅವರು ವರ್ಷದಲ್ಲಿ 68ಕೋಟಿ ರೂ.ಗಳಿಸಿ  7ನೇ ಸ್ಥಾನದಲ್ಲಿದ್ದಾರೆ.  ಟಾಪ್ 10 ಸೆಲೆಬ್ರಿಟಿಗಳ ಹೆಸರುಗಳಲ್ಲಿ ಕಂಡುಬಂದ  ಏಕೈಕ ಮಹಿಳಾ ಹೆಸರು ನಟಿ ಪ್ರಿಯಾಂಕ ಚೊಪ್ರಾ ಅವರದಾಗಿತ್ತು.


ತಾರೆಗಳ ಮನೋರಂಜನಗೆ ಸಂಬಂಧಿಸಿದಂತ ಚಟುವಟಿಕೆಗಳ ಗಳಿಕೆಯ ಲೆಕ್ಕಾಚಾರದ ಮೇಲೆ ‘2017 ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100’ ಪಟ್ಟಿ ತಯಾರಿಸಲಾಗಿದ್ದು, ಇದರಲ್ಲಿ ದಕ್ಷಿಣ ಭಾರತದ 13 ನಟರು  ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ