ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ನ ನಿರ್ಮಾಪಕರಿಗೆ ಸಾಮಾಜಿಕ ಜಾಲತಾಣಗಳೇ ದೊಡ್ಡ ಶತ್ರುಗಳಾಗಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿ ಪುತ್ರ ಸಿನಿಮಾವೂ ಇಂತಹದ್ದೊಂದು ಸಂಕಷ್ಟಕ್ಕೆ ಒಳಗಾಗಿದೆ.
ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅಂಜನಿ ಪುತ್ರ ಸಿನಿಮಾವನ್ನು ಯಲಹಂಕಾ ಮೂಲದ ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರಸಾರವಾಗಿದೆ! ಅದೂ ಒಂದು ಗಂಟೆಯಷ್ಟು ಸಿನಿಮಾ ದೃಶ್ಯ ಥಿಯೇಟರ್ ನಿಂದ ನೇರವಾಗಿ ಲೀಕ್ ಆಗಿದೆ.
ಈತ ಫೇಸ್ ಬುಕ್ ನಲ್ಲಿ ಪ್ರಸಾರವಾಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ವ್ಯಕ್ತಿ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಇದಕ್ಕಿಂತ ಮೊದಲು ಧ್ರುವ ಸರ್ಜಾ ಅಭಿನಯದ ‘ಅದ್ಧೂರಿ’, ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಕೂಡಾ ಇದೇ ರೀತಿ ಫೇಸ್ ಬುಕ್ ನಲ್ಲಿ ಲೈವ್ ಆಗಿ ಕಿಡಿಗೇಡಿಗಳು ಪ್ರಸಾರ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ