Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಮತ್ತೆ ಕಟೀಲು ದುರ್ಗಾ ದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್

abusive post
ಮಂಗಳೂರು , ಗುರುವಾರ, 2 ನವೆಂಬರ್ 2017 (12:39 IST)
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿರುದ್ಧ ಫೇಸ್‌ ಬುಕ್‌ ನಲ್ಲಿ ಮತ್ತೆ ಅವಹೇಳನಕಾರಿ ಪೋಸ್ಟ್‌ ಹಾಕಲಾಗಿದೆ.

ಮಂಗಳೂರು ವ್ಯಕ್ತಿಯೋರ್ವನ ಹೆಸರಿನಿಂದ ನಿರ್ವಹಿಸುತ್ತಿರುವ ಫೇಸ್‌ ಬುಕ್‌ ಪೇಜ್‌ ನಲ್ಲಿ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಹೀಗೆ ಎಲ್ಲಾ ದೇವರುಗಳ ವಿರುದ್ಧ ಅಸಹ್ಯಕರ ಹಾಗೂ ವಿಕೃತ ಪೋಸ್ಟ್‌ಗಳನ್ನು ಹಾಕಲಾಗಿದೆ.

ಈ ಹಿಂದೆಯೂ ಇಂತಹದ್ದೇ ವಿವಾದಾತ್ಮಕ ಹಾಕಿದ್ದವರ ವಿರುದ್ಧ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದ್ದರು. ಆಗ ಡವರ್ಜ್ ಮೊಹಿದೀನ್ ಹಾಗೂ ಶಫಿ ಬಿ.ಎಂ. ಎಂಬುವರನ್ನು ಬಂಧಿಸಲಾಗಿತ್ತು. ಈ ಘಟನೆ ಮರೆಯುವ ಮುನ್ನವೇ ಮತ್ತೋರ್ವ ವ್ಯಕ್ತಿ ಫೇಸ್‌ ಬುಕ್‌ ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ, ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾನೆ.

ಈ ವ್ಯಕ್ತಿ ಸದ್ಯ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದರೂ, ಈತನ ಕಾಮೆಂಟ್‌ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಪಂ ಹಗರಣದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್‌ಗೆ ಕ್ಲೀನ್ ಚಿಟ್: ರಾಹುಲ್ ಗಾಂಧಿ ವಾಗ್ದಾಳಿ