Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಸಿದ್ಧರಾಮಯ್ಯ ಅವರ ಮೇಲೆ ಕಿಡಿಕಾರಿದ ಅನಂತ ಕುಮಾರ್ ಹೆಗಡೆ; ಫೋಸ್ಟ್ ನಲ್ಲಿ ಏನಿದೆ ನೋಡಿ

ಫೇಸ್ ಬುಕ್ ನಲ್ಲಿ ಸಿದ್ಧರಾಮಯ್ಯ ಅವರ ಮೇಲೆ ಕಿಡಿಕಾರಿದ ಅನಂತ ಕುಮಾರ್ ಹೆಗಡೆ; ಫೋಸ್ಟ್ ನಲ್ಲಿ ಏನಿದೆ ನೋಡಿ
ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2017 (11:42 IST)
ಬೆಂಗಳೂರು : ಪರೇಶ್‌ ಮೇಸ್ತ ಕೊಲೆ ಪ್ರಕರಣದ ಬಳಿಕ ಶಿರಸಿಯಲ್ಲಿ ನಡೆದ ಬಂದ್‌, ಅನಂತರದ ಘಟನೆಗಳಿಗೆ ಸಂಬಂಧಿಸಿದಂತೆ ಬಂಧಿಸಿ ಧಾರವಾಡ ಕಾರಾಗೃಹಕ್ಕೆ ಕಳಿಸಲಾಗಿದ್ದ 62 ಜನರಿಗೆ ಮಧ್ಯಾಂತರ ಜಾಮೀನು ಲಭಿಸಿದ ಬೆನ್ನಲ್ಲೆ  ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ 'ಸಾಕ ಬೇಕಾ ತಪರಾಕಿ ಸಿದ್ದರಾಮಯ್ಯನವರೇ.. ಮುಂದಿದೆ ಶಿರಸಿಯ ಮಾರಿಕಾಂಬ ಹಬ್ಬ' ಎಂದು ಬರೆದಿದ್ದಾರೆ. 


ಶಿರಸಿಯಲ್ಲಿ ಬಂಧಿತರಾಗಿದ್ದ 62 ಜನರಿಗೆ ಶಿರಸಿ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಗುರುವಾರ ಮಧ್ಯಾಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದರು. 


ಅನಂತ ಕುಮಾರ್ ಹೆಗಡೆ ಫೇಸ್ ಬುಕ್ ಪೋಸ್ಟ್‌ನಲ್ಲೇನಿದೆ ? 
ಸಾಕ ಬೇಕಾ ತಪರಾಕಿ ಸಿದ್ದರಾಮಯ್ಯನವರೇ!!  ನಿಂಬಾಳ್ಕರ್, ರಾಮಲಿಂಗ ರೆಡ್ಡಿ ಹಾಗು ಕೆಂಪಯ್ಯನಂಥ ಜನರಿದ್ದರೆ ಮುಂದಿದೆ ನೋಡಿ ಇನ್ನು ಶಿರಸಿಯ ದೊಡ್ಡ ಮಾರಿಕಾಂಬ ಹಬ್ಬ!
ಶಿರಸಿಯಲ್ಲಿ ಮೊನ್ನೆಯ ದಿನ Police ಪ್ರೇರಿತ ಗಲಭೆಯಲ್ಲಿ ಬಂಧಿತರಾಗಿದ್ದ 62 ಮಂದಿ ಮುಗ್ದರನ್ನು ಶಿರಸಿ ನ್ಯಾಯಾಲಯ ಇಂದು ಜಾಮೀನು ಪಡೆದು ಬಿಡುಗಡೆಗೆ ಆದೇಶಿಸಿದೆ. ಕೇವಲ ಒಂದೂವರೆ ದಿನದಲ್ಲಿ ಬಿಡುಗಡೆಯ ಆದೇಶ ಪಡೆದ ಕ್ರಮವು ಐತಿಹಾಸಿಕವಾಗಿದ್ದು, ಈ ತೀರ್ಪು police ಸಮವಸ್ತ್ರದಲ್ಲಿ ದಾದಾಗಿರಿ ಮಾಡಲು ಹೊರಟಿದ್ದ ನಿಂಬಾಳ್ಕರ್ ಎಂಬ ಹುಂಬ ಅಧಿಕಾರಿಗೆ ತೀವ್ರವಾದ ಕಪಾಳ ಮೋಕ್ಷ ಮಾಡಿದಂತಾಗಿದೆ! Section 307  ಅನ್ನು ಮನಬಂದಂತೆ ಜರುಗಿಸಿ ವಿಕೃತ ಪಭುತ್ವ ಸಾಧಿಸಲು ಹೊರಟರೆ, ಈ ದೇಶದ ಕಾನೂನು ಸುಮ್ಮನೆ ಕೂರುವುದಿಲ್ಲ ಎಂದು ಇಂದಿನ ನ್ಯಾಯಾಲಯದ ತೀರ್ಮಾನ ಸ್ಪಷ್ಟವಾಗಿ ತಿಳಿಸಿದೆ. ಇದು ಪ್ರಜಾಪ್ರಭುತ್ವದ ವಿಜಯ!


ಸನ್ಮಾನ್ಯ ಸಿದ್ಧರಾಮಯ್ಯನವರೇ ನಿಮ್ಮ ಮುಖವನ್ನು ಮತ್ತೊಮ್ಮೆ ಕನ್ನಡಿ ಮುಂದೆ ನೋಡಿಕೊಳ್ಳಿ! ನಿಮ್ಮ ಒಡ್ಡೋಲಗದ ಸಹೋದ್ಯೋಗಿಗಳು ಸಹ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗುವ ದಿನ ದೂರವಿಲ್ಲ. ವಿದ್ರೋಹಿಗಳ ಬೆಂಬಲಕ್ಕೆ ನಿಂತು ದೇಶ ಭಕ್ತರನ್ನು ಸದೆಬಡಿಯುವ ನಿಮ್ಮ ಯೋಜನೆಗೆ, ನಿಮ್ಮ ಅಮೂಲ್ಯ ಸಲಹೆಗಾರನಾಗಲಿ ಅಥವಾ ನಾಲಾಯಕ್ ಗೃಹ ಮಂತ್ರಿಯಾಗಲಿ ಇನ್ನೇನು ತಾನೇ ಕಿಸಿಯಲು ಸಾಧ್ಯ?


ನಮ್ಮ ಹೋರಾಟಕ್ಕೆ ಇಂದಿನ ಈ ತೀರ್ಪು ಬಹು ದೊಡ್ಡ ನೈತಿಕ ಬೆಂಬಲ ನೀಡಿ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದ್ದು ಕೋಮುವಾದಿ, ಜಾತಿವಾದಿ ಹುಂಬ ಸರ್ಕಾರವಲ್ಲದೆ, ದೇಶದೊಳಗೆ ಇರುವ ವಿದ್ರೋಹಿಗಳಿಗೆ ಸಹ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ. ಹುಂಬ ಧೈರ್ಯವಿದ್ದರೆ ಎದುರಿಸಲಿ!
ನ್ಯಾಯಾಲಯದಲ್ಲಿ ನಮ್ಮ ದೇಶ ಭಕ್ತರ ಪರವಾಗಿ ವಾದಿಸಿ ನ್ಯಾಯ ದೊರೆಕಿಸಿಕೊಟ್ಟ ಅಷ್ಟು ವೃಂದದವರಿಗೆ ನನ್ನ ಬಹುದೊಡ್ಡ ಧನ್ಯವಾದಗಳು. ದೇಶ ಕಟ್ಟುವ ಕೆಲಸದಲ್ಲಿ ಜೊತೆಯಾದ ವಕೀಲ ಎಲ್ಲರಿಗೂ ನನ್ನ ಅನಂತ ವಂದನೆಗಳು.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ಮೋದಿಗೆ ಬೆವರು ಇಳಿಸಲು ಕಾಂಗ್ರೆಸ್ ಲೆಕ್ಕಾಚಾರ