Publish Date: Thu, 02 Nov 2017 (09:51 IST)
Updated Date: Thu, 02 Nov 2017 (09:53 IST)
ಮದುರೈ: ಪ್ರಧಾನಿ ಮೋದಿ ವಿರುದ್ಧ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ ತಮಿಳು ನಟ ವಿಜಯ್ ಅಭಿಮಾನಿಯೊಬ್ಬನನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ.
ತಾನು ತಮಿಳು ನಟ ವಿಜಯ್ ಅಭಿಮಾನಿ ಎಂದಿರುವ ಯುವಕ ಸಚಿನ್ ತಿರು ಎನ್ನುವ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದಾನೆ. ವಿಜಯ್ ಮರ್ಸೆಲ್ ಚಿತ್ರದಲ್ಲಿ ಜಿಎಸ್ ಟಿ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ ಎಂದು ಸಿನಿಮಾ ಬಗ್ಗೆ ಇತ್ತೀಚೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹವಾಗಿ ಬರೆದುಕೊಂಡಿದ್ದ ಈತ ಪ್ರಧಾನಿ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆಯೂ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಮಧುರೈ ಬಿಜೆಪಿ ಘಟಕ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಯುವಕನನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ