Publish Date: Thu, 02 Nov 2017 (09:41 IST)
Updated Date: Thu, 02 Nov 2017 (09:43 IST)
ಬೆಂಗಳೂರು: ಪ್ರಧಾನಿ ಮೋದಿ ಮೇಲೆ ಕಿಡಿ ಕಾರುವಾಗ ಎಡವಟ್ಟು ಮಾಡಿಕೊಂಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರುವಾಗ ಅವರನ್ನು ಭೂತಕ್ಕೆ ಹೋಲಿಸಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಬೇನಾಮಿ ಹಣಕ್ಕೆ ಕಡಿವಾಣ ಬಿದ್ದಿದೆ. ನೋಟು ನಿಷೇಧದ ಮೂಲಕ ಭ್ರಷ್ಟರಿಗೆ ಅವರು ಸಿಂಹ ಸ್ವಪ್ನರಾಗಿದ್ದಾರೆ. ಅದಕ್ಕೇ ರಮ್ಯಾಗೆ ಪ್ರಧಾನಿ ಮೋದಿ ಭೂತದಂತೆ ಕಾಣುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ