Select Your Language

Notifications

webdunia
webdunia
webdunia
webdunia

ಮಹಿಳೆಗಾದ ಅಗೌರವದ ವಿರುದ್ದ ನನ್ನ ಕಾನೂನು ಹೋರಾಟ: ಅನುಪಮಾ ಶೆಣೈ

ಮಹಿಳೆಗಾದ ಅಗೌರವದ ವಿರುದ್ದ ನನ್ನ ಕಾನೂನು ಹೋರಾಟ: ಅನುಪಮಾ ಶೆಣೈ
ಬಳ್ಳಾರಿ , ಬುಧವಾರ, 1 ನವೆಂಬರ್ 2017 (17:22 IST)
ಬಳ್ಳಾರಿ: ನಿನ್ನೆ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ ಬೆನ್ನಲ್ಲೇ ಇಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಅನುಪಮಾ ಶೆಣೈ ತಮ್ಮ ಹೊಸ ಪಕ್ಷಕ್ಕೆ 'ಭಾರತೀಯ ಜನಶಕ್ತಿ ಕಾಂಗ್ರೆಸ್' ಹೆಸರಿಟ್ಟಿದ್ದಾರೆ. ಚುನಾವಣಾ ಆಯೋಗದಿಂದ ಪಕ್ಷಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಶೆಣೈ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದೇವೆ. ನಾನು ಚುನಾವಣೆಗೆ ಸ್ಪರ್ಧಿಸಲು ಆಸೆಯಿದೆ. ಕ್ಷೇತ್ರ ಯಾವುದು ಎಂದು ಇನ್ನೂ ಅಂತಿಮವಾಗಿಲ್ಲ ಎಂದರು.

ಕೃಷಿ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ, ಸಾರಿಗೆ ಮತ್ತು ಶಿಕ್ಷಣದಲ್ಲಿರುವವರಿಗೆ ಪಕ್ಷದಿಂದ ಸ್ಪರ್ಧಿಸಲು ಹೆಚ್ಚು ಒತ್ತು ನೀಡುತ್ತೇವೆ. ಡಿವೈಎಸ್ಪಿ ರಾಜೀನಾಮೆ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆದಿದೆ. ಕಾನೂನು ಹೋರಾಟದಲ್ಲಿ ಜಯ ಸಿಗದೆ ಮರಳಿ ಇಲಾಖೆಗೆ ಹೋಗಲು ಅಲ್ಲ. ಬದಲಾಗಿ ಸರ್ಕಾರಿ ನೌಕರರಿಗೆ ಆದ ಅನ್ಯಾಯ, ಮಹಿಳೆಗೆ ಆದ ಅಗೌರವದ ವಿರುದ್ದ ಕಾನೂನು ಹೋರಾಟ ಮಾಡುತ್ತಿರುವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

`5 ತಿಂಗಳಾದರೂ ನಿರ್ಭಯಾ ಕೇಸ್ ಅಪರಾಧಿಗಳಿಗೆ ಗಲ್ಲಿಗೇರಿಸಿಲಿಲ್ಲವೇಕೆ’