Select Your Language

Notifications

webdunia
webdunia
webdunia
webdunia

ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ ರಿಯಲ್ ಸ್ಟಾರ್ ಉಪ್ಪಿ

Realstar
ಬೆಂಗಳೂರು: ರಿಯಲ್ ರಾಜಕೀಯಕ್ಕೆ ಬರುವುದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷಕ್ಕೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ(KPJP) ಎಂದು ಹೆಸರಿಟ್ಟಿದ್ದಾರೆ.

ಇಂದು ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಮೊದಲು ಉಪೇಂದ್ರ ಪಕ್ಷಕ್ಕೆ ಪ್ರಜಾಕೀಯ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಲ್ಲಿ ಕರೆಯುತ್ತಿದ್ದರು. ಇಂದು ಅಧಿಕೃತವಾಗಿ ಅದಕ್ಕೆ ನಾಮಕರಣ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಉಪೇಂದ್ರ ತಂದೆ, ತಾಯಿ, ಸಹೋದರ ಸುಧೀಂದ್ರ, ಪತ್ನಿ ಪ್ರಿಯಾಂಕ, ಚಿತ್ರರಂಗದ ಸ್ನೇಹಿತರು ಸಾತ್ ನೀಡಿದರು. ಎಲ್ಲರೂ ಸಹ ಖಾಕಿವಸ್ತ್ರದಲ್ಲಿ ಗಮನ ಸೆಳೆದರು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕಂಡ್ರೆ ಮೋದಿಗೆ ಭಯ ಸಿಎಂ ಹೇಳಿಕೆಗೆ ಬಿಎಸ್‌ವೈ ತಿರುಗೇಟು