Select Your Language

Notifications

webdunia
webdunia
webdunia
webdunia

ಮಳೆ ಬಂದಾಗ ಬೆಂಗಳೂರು ತತ್ತರ.. ಹೊಸ ಐಡಿಯಾ ಮಾಡಿದ ಉಪೇಂದ್ರ

ಮಳೆ ಬಂದಾಗ ಬೆಂಗಳೂರು ತತ್ತರ.. ಹೊಸ ಐಡಿಯಾ ಮಾಡಿದ ಉಪೇಂದ್ರ
ಬೆಂಗಳೂರು , ಸೋಮವಾರ, 4 ಸೆಪ್ಟಂಬರ್ 2017 (12:25 IST)
ಧೋ ಸುರಿಯುತ್ತಿರುವ ಮಳೆಗೆ ಬೆಂಗಳೂರು ನಗರದ ಜನ ತತ್ತರಿಸಿಹೋಗಿದ್ದಾರೆ. ಎಲ್ಲಿ ನೋಡಿದರೂ ನೀರೋ ನೀರು. ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಹಲವೆಡೆ ಒಳಚರಂಡಿಗಳ ಅದ್ವಾನದಿಂದಾಗಿ ನೀರು ಮನೆಗಳಿಗೆ ನುಗ್ಗುತ್ತಿರುವ ಸುದ್ದಿಗಳನ್ನ ನೋಡಿದ್ದೀರಿ. ಇದೀಗ, ಪ್ರಜಾಕಾರಣಿ ಉಪೇಂದ್ರ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ.

ಅಮೆರಿಕದ ಸ್ನೇಹಿತರೊಬ್ಬರ ಜೊತೆ ಬೆಂಗಳೂರಿನ ಒಳ ಚರಂಡಿ ವ್ಯವಸ್ಥೆಗಳ ಬಗ್ಗೆ ಹೊಸ ಉಪಾಯವೊಂದನ್ನ ಬಿಚ್ಚಿಟ್ಟಿರುವ ಉಪೇಂದ್ರ ಜನರ ಸಹಕಾರ ಕೋರಿದ್ದಾರೆ. ನಗರದಲ್ಲಿ ಅತಿಯಾದ ಮಳೆಯಾದರೆ ಏನು ಮಾಡಬೇಕು..? ಒಳ ಚರಂಡಿ ವ್ಯವಸ್ಥೆ ಸುಧಾರಿಸುವುದು ಹೇಗೆ..? ಬೆಂಗಳೂರಿನಲ್ಲಿ ಹೀಗಿರುವ ಒಳಚರಂಡಿಗಳ ದೋಷಗಳೇನು..? ಎಂಬ ಬಗ್ಗೆ ಉಪೇಂದ್ರ ಚರ್ಚೆ ಮಾಡಿದ್ದಾರೆ.



ಸದ್ಯ, ಬೆಂಗಳೂರಲ್ಲಿ ಒಳಚರಂಡಿ ವ್ಯವಸ್ಥೆಗೆ ಖರ್ಚು ಮಾಡುತ್ತಿರುವ ಹಣದಲ್ಲಿ ಶೇ.50ರಷ್ಟರಲ್ಲಿ ಸುಸಜ್ಜಿತ ಆಧುನಿಕ ಒಳಚರಂಡಿ ವ್ಯವಸ್ಥೆ ಮಾಡಬಹುದಾಗಿದೆ. ಬ್ಯುಸಿನೆಸ್ ಆಗಿರುವ ರಾಜಕಾರಣ ನಿಲ್ಲಿಸಿ ಪ್ರಜಾಕಾರಣಕ್ಕೆ ಬೆಂಬಲ ನೀಡುವಂತೆ ಉಪೇಂದ್ರ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮೋಡಿ ಮಾಡಿತು ಗಣಿ-ಭಟ್ಟರ ಜೋಡಿ!