Select Your Language

Notifications

webdunia
webdunia
webdunia
webdunia

ಜನ್ಮದಿನದಂದೇ ನಟ ಕಮಲ್‌ಹಾಸನ್ ಹೊಸ ಪಕ್ಷ ಘೋಷಣೆ

ಜನ್ಮದಿನದಂದೇ ನಟ ಕಮಲ್‌ಹಾಸನ್ ಹೊಸ ಪಕ್ಷ ಘೋಷಣೆ
ಚೆನ್ನೈ , ಬುಧವಾರ, 4 ಅಕ್ಟೋಬರ್ 2017 (18:08 IST)
ತಮ್ಮ ಜನ್ಮದಿನದಂದೇ ಬಹುಭಾಷಾ ನಟ ಕಮಲ್‌ಹಾಸನ್ ಹೊಸ ಪಕ್ಷ ಘೋಷಿಸುವುದಾಗಿ ಹೇಳಿದ್ದಾರೆ.
ಇಂದು ಅವರ ನಿವಾಸದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಆವರು, ನವೆಂಬರ್ 7 ರಂದು ಹೊಸ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ.
 
ಹೊಸ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೊಸ ರಾಜಕೀಯ ಪಕ್ಷಕ್ಕೆ ಸಲಹೆಗಳನ್ನು ನೀಡುವುದಾದಲ್ಲಿ ಸ್ವಾಗತಿಸುತ್ತೇನೆ. ಪಕ್ಷದ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
 
ಕಮಲ್‌ಹಾಸನ್ ಇಂದು ಕರೆದ ಸಭೆಗೆ ಗಣ್ಯಾತಿಗಣ್ಯರು ಹಾಜರಾಗಿ ನೂತನ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಮುಂಬರುವ ದಿನಗಳಲ್ಲಿ ತಮಿಳುನಾಡಿನ ರಾಜ್ಯ ರಾಜಕೀಯ ಯಾವ ರೀತಿ ಬದಲಾವಣೆಗೆ ನಾಂದಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನೊಂದಿಗೆ ಮಹಿಳೆ ಸೆಕ್ಸ್‌ನಲ್ಲಿದ್ದಾಗ ಪತಿ ಬಂದ,..ಏನಾಯಿತು ಗೊತ್ತಾ?