Publish Date: Mon, 27 Nov 2017 (09:13 IST)
Updated Date: Mon, 27 Nov 2017 (09:15 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಎಂದರೆ ಪವರ್ ಸ್ಟಾರ್ ಎಂಬ ಹೆಸರು ಹಿಂದೆಯೇ ಬರುತ್ತದೆ. ಹಾಗಿದ್ದರೆ ಪವರ್ ಸ್ಟಾರ್ ಗೆ ಈ ಬಿರುದು ಕೊಟ್ಟಿದ್ದು ಯಾರು?
ಪುನೀತ್ ಸಹೋದರ ಶಿವರಾಜ್ ಕುಮಾರ್ ಇದನ್ನು ಬಹಿರಂಗಪಡಿಸಿದ್ದಾರೆ. ಅಂಜನಿ ಪುತ್ರ ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಈ ವಿಷಯ ಬಹಿರಂಗಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಎಂದು ಅಭಿಮಾನಿಗಳು ಕೂಗುತ್ತಿದ್ದರೆ, ವೇದಿಕೆ ಏರಿದ ಶಿವಣ್ಣ ‘ನೀವಿವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಲ್ಲ. ಆ ಪವರ್ ಸ್ಟಾರ್ ಗೆ ಪವರ್ ಕೊಟ್ಟಿದ್ದೇ ಈ ಟವರ್’ ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದರು ಶಿವಣ್ಣ.
ಚಿಕ್ಕಂದಿನಿಂದಲೇ ಪುನೀತ್ ತುಂಬಾ ಆಕ್ಟಿವ್. ಅವನ ಬೆಳವಣಿಗೆ ನೋಡಿ ಪವರ್ ಸ್ಟಾರ್ ಎಂದು ಕೊಟ್ಟರೆ ಚೆನ್ನಾಗಿರುತ್ತದೆ ಎಂದು ನಾನೇ ಸೂಚಿಸಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ